ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ಬಿವೈ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್ ಎಂದು ಇತ್ತೀಚೆಗಷ್ಟೇ ಪಕ್ಷದಿಂದ ಉಚ್ಛಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಯತ್ನಾಳ್ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು ಮತ್ತೆ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದಲ್ಲೂ ಇದೇ ಟೀಂ ಕೆಲಸ ಮಾಡಿದೆ. ಈ ಅಪ್ಪ-ಮಕ್ಕಳ ಹೊಂದಾಣಿಕೆ ರಾಜ್ಯವನ್ನು ತಡೆಯುತ್ತೇನೆ. ನಾನು ಏನೇ ಆದರೂ ಬೇರೆ ಪಕ್ಷಕ್ಕೆ ಹೋಗಲ್ಲ. ಬಿಜೆಪಿಯಲ್ಲೇ ಇದ್ದು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡುತ್ತಿರುವಾಗ ಯತ್ನಾಳ್ ಈ ಹೇಳಿಕೆ ಸಂಚಲನ ಸೃಷ್ಟಿಸಿದೆ. ಯತ್ನಾಳ್ ಹೇಳಿರುವುದಕ್ಕೆ ಯಾವುದಾದರೂ ಸಾಕ್ಷ್ಯಗಳಿವೆಯೇ ಎಂದು ತಿಳಿದುಬಂದಿಲ್ಲ. ಒಂದು ವೇಳೆ ಅವರು ಸಾಕ್ಷ್ಯಗಳನ್ನಿಟ್ಟುಕೊಂಡೇ ಮಾತನಾಡಿದ್ದರೆ ಅದು ವಿಜಯೇಂದ್ರರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.