Select Your Language

Notifications

webdunia
webdunia
webdunia
webdunia

ಬೇರೆ ಪಕ್ಷ ಕಟ್ಟಲ್ಲ, ಬಿಜೆಪಿಯನ್ನೇ ರಿಪೇರಿ ಮಾಡ್ತೀನಿ: ಬಸನಗೌಡ ಯತ್ನಾಳ್ ಶಪಥ

Basanagowda Patil Yatnal

Krishnaveni K

ಬೆಂಗಳೂರು , ಶನಿವಾರ, 29 ಮಾರ್ಚ್ 2025 (12:27 IST)
ಬೆಂಗಳೂರು: ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಒಂದು ದಿನ ಸೈಲೆಂಟ್ ಆಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಬೇರೆ ಪಕ್ಷ ಕಟ್ಟಲ್ಲ, ಬಿಜೆಪಿಯನ್ನೇ ರಿಪೇರಿ ಮಾಡ್ತೀನಿ ಎಂದು ಶಪಥ ಮಾಡಿದ್ದಾರೆ.

ಮೊನ್ನೆಯಷ್ಟೇ ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ ರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ಅವರು ಸೈಲೆಂಟ್ ಆಗಿದ್ದರು. ಮಾಧ್ಯಮಗಳ ಮುಂದೆ ಬರದೇ ಸೋಷಿಯಲ್ ಮೀಡಿಯಾದಲ್ಲಿ ಹರಿಹಾಯ್ದಿದ್ದರು.

ಇದರ ನಡುವೆ ಅವರು ತಮ್ಮ ಬೆಂಬಲಿಗ ನಾಯಕರೊಂದಿಗೆ ಸಭೆ ನಡೆಸಿದ್ದು ಬೇರೆ ಪಕ್ಷ ಕಟ್ಟದೇ ಇರಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ಮತ್ತೆ ಯಡಿಯೂರಪ್ಪ ಮತ್ತು ಮಕ್ಕಳಿಗೆ ಟಾಂಗ್ ನೀಡಿದ್ದಾರೆ.

‘ಬಿಜೆಪಿ ನನ್ನ ಮಾತೃ ಸಮಾನ. ಕೆಜೆಪಿಯಂತೆ ಬೇರೆ ಪಕ್ಷ ಕಟ್ಟಿ, ಬಿಜೆಪಿ ಹಾಳು ಮಾಡಿದಂತೆ, ನಾನು ಬಿಜೆಪಿ ಹಾಳು ಮಾಡಲು ಅವಕಾಶ ಕೊಡಲ್ಲ. ಹೊಸ ಪಕ್ಷ ಕಟ್ಟಲ್ಲ. ನನ್ನನ್ನು ಪಕ್ಷಕ್ಕೆ ಕರೆಸಿ ಎಂದು ಬೇಡಿಕೊಳ್ಳಲ್ಲ. ಹೋರಾಟ ಮಾಡಿ ಬಿಜೆಪಿಯನ್ನು ರಿಪೇರಿ ಮಾಡುತ್ತೇನೆ’ ಎಂದು ಯತ್ನಾಳ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Myanmar earthquake: ಮ್ಯಾನ್ಮಾರ್ ಭೂಕಂಪದಲ್ಲಿ 700 ರ ಗಡಿ ತಲುಪಿದ ಸಾವಿನ ಸಂಖ್ಯೆ: ರಸ್ತೆ ಬದಿಯಲ್ಲೇ ಟ್ರೀಟ್ಮೆಂಟ್