ಮ್ಯಾನ್ಮಾರ್: ಭಾರತದ ನೆರೆಯ ರಾಷ್ಟ್ರ ಮ್ಯಾನ್ಮಾರ್ ನಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 700 ರ ಗಡಿ ತಲುಪಿದೆ. ಗಾಯಗೊಂಡವರಿಗೆ ರಸ್ತೆ ಬದಿಯಲ್ಲೇ ಟ್ರೀಟ್ಮೆಂಟ್ ನೀಡುವ ಹೃದಯ ವಿದ್ರಾವಕ ದೃಶ್ಯ ಕಂಡುಬಂದಿದೆ.
ನಿನ್ನೆ ಮಧ್ಯಾಹ್ನ 11.50 ರ ವೇಳೆ ಮ್ಯಾನ್ಮಾರ್ ನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ನೋಡ ನೋಡುತ್ತಿದ್ದಂತೇ ಗಗನಚುಂಬಿ ಕಟ್ಟಡಗಳು ಧರೆಗುರುಳಿದ್ದವು. ಸಾಕಷ್ಟು ಜನ ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡಿದ್ದಾರೆ.
ಇದೀಗ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 700 ರ ಗಡಿ ತಲುಪಿದೆ. 1700 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಪರಿಹಾರ ಕಾರ್ಯ ಭರದಿಂದ ನಡೆಯುತ್ತಿದೆ. ಈ ನಡುವೆ ಗಾಯಗೊಂಡವರನ್ನು ರಸ್ತೆಯ ಬದಿಯಲ್ಲೇ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳೂ ಕಂಡುಬಂದಿದೆ.
ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಮ್ಯಾನ್ಮಾರ್ ಗೆ ನೆರವಿನ ಹಸ್ತ ಚಾಚಿದೆ. ನೂರಾರು ಮಂದಿ ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆಯಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.