Select Your Language

Notifications

webdunia
webdunia
webdunia
webdunia

ಪ್ರಬಲ ಭೂಕಂಪಕ್ಕೆ ಮ್ಯಾನ್ಮಾರ್‌ ತತ್ತರ: ಗಗನಚುಂಬಿ ಕಟ್ಟಡಗಳು ನೆಲಸಮ, ಭಯಾನಕ ವಿಡಿಯೋ ಇಲ್ಲಿದೆ

Strong earthquake in Myanmar, National Seismological Center, Richter scale

Sampriya

ಬ್ಯಾಂಕಾಕ್ , ಶುಕ್ರವಾರ, 28 ಮಾರ್ಚ್ 2025 (14:00 IST)
Photo Courtesy X
ಬ್ಯಾಂಕಾಕ್: ಇಂದು ಸಂಭವಿಸಿದ ಪ್ರಬಲ ಭೂಕಂಪಕ್ಕೆ ಮ್ಯಾನ್ಮಾರ್‌ ತತ್ತರಿಸಿದೆ. ಭೀಕರ ಭೂಕಂಪಕ್ಕೆ ಹಲವೆಡೆ ಗಗನಚುಂಬಿ ಕಟ್ಟಡಗಳು ಬಿರುಕುಬಿಟ್ಟಿವೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಸಾಗಯಿಂಗ್ ನಗರದ ವಾಯುವ್ಯಕ್ಕೆ ಭೂಮಿಯ 10 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಮ್ಯಾನ್ಮಾರ್‌ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.

ಶುಕ್ರವಾರ ಬೆಳಗ್ಗೆ 11:50ರ ಸುಮಾರಿಗೆ 7.7 ತೀವ್ರಯ ಭೂಕಂಪ ಸಂಭವಿಸಿದೆ. 12:50ರ ಸುಮಾರಿಗೆ 6.8 ತೀವ್ರತೆಯಲ್ಲಿ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ.  ಅಲ್ಲದೆ, ಕನಿಷ್ಠ 43 ಕಾರ್ಮಿಕರು ನಾಪತ್ತೆಯಾಗಿದ್ದಾರೆ.

ಬ್ಯಾಂಕಾಕ್ ಹಾಗೂ ಥಾಯ್ಲೆಂಡ್‌ನಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಕಟ್ಟಡಗಳು ಅಲುಗಾಡಿವೆ, ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ ದೃಶ್ಯಗಳು ಸೆರೆಯಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price Today: ಅಬ್ಬಬ್ಬಾ... ಚಿನ್ನ ಈಗ ಕೈಗೆಟುಕದ ನಕ್ಷತ್ರ, ಇಂದಿನ ಬೆಲೆ ಎಷ್ಟಾಗಿದೆ ನೋಡಿ