Select Your Language

Notifications

webdunia
webdunia
webdunia
webdunia

Gold Price Today: ಅಬ್ಬಬ್ಬಾ... ಚಿನ್ನ ಈಗ ಕೈಗೆಟುಕದ ನಕ್ಷತ್ರ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

Gold

Krishnaveni K

ಬೆಂಗಳೂರು , ಶುಕ್ರವಾರ, 28 ಮಾರ್ಚ್ 2025 (11:52 IST)
ಬೆಂಗಳೂರು: ಚಿನ್ನ ಖರೀದಿ ಮಾಡಬೇಕು ಎಂದುಕೊಂಡವರಿಗೆ ಈಗ ಹಳದಿ ಲೋಹ ಕೈಗೆಟುಕದ ನಕ್ಷತ್ರವಾಗಿದೆ. ಕಳೆದ ಎರಡು ದಿನಗಳಿಂದ ಚಿನ್ನದ ದರ ಭಾರೀ ಏರಿಕೆಯಾಗಿದೆ. ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಾಗಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಯುಗಾದಿ ಹಬ್ಬಕ್ಕೆ ಮುನ್ನ ಈಗ ಬೆಲೆ ದಾಖಲೆಯ ಮಟ್ಟಕ್ಕೆ ತಲುಪಿದೆ. ನಿನ್ನೆಯೂ ಪರಿಶುದ್ಧ ಚಿನ್ನದ ದರ ಏರಿಕೆಯಾಗಿ 90,640 ರೂ.ಗಳಷ್ಟಿತ್ತು. ಇಂದೂ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಇಂದಂತೂ 91,365 ರೂ.ಗಳಷ್ಟಾಗಿದೆ. ಸದ್ಯಕ್ಕೆ ಮಧ್ಯಮ ವರ್ಗದವರಿಗೆ ಚಿನ್ನ ಗಗನ ಕುಸುಮವೇ ಸರಿ.

22,24 ಮತ್ತು 18 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆಯಲ್ಲೂ ಸತತ ಮೂರನೇ ದಿನ ಭಾರೀ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 105 ರೂ. ಏರಿಕೆಯಾಗಿದ್ದು 8,340 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 114 ರೂ. ಏರಿಕೆಯಾಗಿದ್ದು 9,098 ರೂ. ಗಳಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 86 ರೂ. ಏರಿಕೆಯಾಗಿದ್ದು ಇಂದು ಗ್ರಾಂಗೆ 6,824 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕೊಂಚವೇ ಇಳಿಕೆಯಾಗುತ್ತಿತ್ತು. ಆದರೆ ಇಂದು ಬೆಳ್ಳಿ ಬೆಲೆಯಲ್ಲೂ ವಿಪರೀತ ಏರಿಕೆಯಾಗಿದೆ. ಇಂದು ಪ್ರತೀ ಕೆ.ಜಿ.ಗೆ 3,000 ರೂಗಳಷ್ಟು ಏರಿಕೆಯಾಗಿದ್ದು ಇಂದು 1,05,000 ರೂ.ಗಳಿಗೆ ಬಂದು ತಲುಪಿತ್ತು. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರ ಸಂಬಳ ಏರಿಸಕ್ಕೆ ದುಡ್ಡಿದೆ, ರೈತರಿಗೆ ಕೊಡಕ್ಕೆ ನಂದಿನಿ ಹಾಲು ದರ ಏರಿಕೆ ಮಾಡ್ಬೇಕಿತ್ತಾ