Select Your Language

Notifications

webdunia
webdunia
webdunia
webdunia

Gold Price today: ಚಿನ್ನ ಖರೀದಿಸುವರಿಗೆ ಸಿಹಿ ಸುದ್ದಿ, ಇಂದೂ ಬೆಲೆ ಇಳಿಕೆ: ಇಲ್ಲಿದೆ ಬೆಲೆ ವಿವರ

Gold
ಬೆಂಗಳೂರು: ಕಳೆದ ಕೆಲವು ದಿನಗಳಿಂದ ದಾಖಲೆಯ ಏರಿಕೆ ಕಾಣುತ್ತಿರುವ ಚಿನ್ನದ ದರ ಇದೀಗ ಇಳಿಕೆಯತ್ತ ಸಾಗಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕೊಂಚ ಕೊಂಚವೇ ಇಳಿಕೆಯಾಗುತ್ತಿದೆ. ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಾಗಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಆದರೆ ಇದೀಗ ಎರಡು ದಿನಗಳಿಂದ ಇಳಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 99.9 ಶುದ್ಧತೆಯ ಚಿನ್ನದ ಬೆಲೆ 90,790 ರೂ. ಆಗಿದೆ. ಈ ಮೂಲಕ ಮತ್ತೆ ಕೊಂಚ ಇಳಿಮುಖವಾಗಿ ಗ್ರಾಹಕರಿಗೆ ನೆಮ್ಮದಿ ತಂದಿದೆ.

ಇಂದು  22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ.  ನಿನ್ನೆಗಿಂತ ಇಂದು ಪ್ರತೀ ಗ್ರಾಂಗೆ 15 ರೂ. ಇಳಿಕೆಯಾಗಿದ್ದು 8,215 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 16 ರೂ. ಇಳಿಕೆಯಾಗಿದ್ದು 8,962 ರೂ. ಗಳಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 12 ರೂ. ಇಳಿಕೆಯಾಗಿದ್ದು ಇಂದು ಗ್ರಾಂಗೆ 6,722 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕೊಂಚವೇ ಇಳಿಕೆಯಾಗುತ್ತಿದ್ದು ಇದೀಗ ಪ್ರತೀ ಕೆ.ಜಿ.ಗೆ 1,01,000 ರೂ.ಗಳಿಗೆ ಬಂದು ತಲುಪಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಇದೀಗ ಇಳಿಕೆಯತ್ತ ಸಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕನಾಥ ಶಿಂಧೆ ದೇಶದ್ರೋಹಿ: ಕಾಮೆಡಿಯನ್ ಕಾಮ್ರಾ ಅಪಹಾಸ್ಯಕ್ಕೆ ರೊಚ್ಚಿಗೆದ್ದ ಶಿವಸೇನೆ ಕಾರ್ಯಕರ್ತರ ವಿಡಿಯೋ