Select Your Language

Notifications

webdunia
webdunia
webdunia
webdunia

Gold Price today: ಇಂದಿನ ಚಿನ್ನದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ, ಎಷ್ಟಾಗಿದೆ ನೋಡಿ

Gold

Krishnaveni K

ಬೆಂಗಳೂರು , ಮಂಗಳವಾರ, 18 ಮಾರ್ಚ್ 2025 (09:31 IST)
ಬೆಂಗಳೂರು: ನಿನ್ನೆ ಕೊಂಚ ಮಟ್ಟಿಗೆ ಇಳಿಕೆಯಾಗಿ ಸಮಧಾನ ಮೂಡಿಸಿದ್ದ ಚಿನ್ನದ ದರ ಇಂದು ಮತ್ತೆ ಭಾರೀ ಏರಿಕೆ ಕಂಡಿದೆ. ಇದರಿಂದ ಚಿನ್ನದ ದರ ಕೇಳಿದರೇ ಬೆಚ್ಚಿ ಬೀಳುವಂತಾಗಿದೆ. ಇಂದಿನ ಚಿನ್ನ, ಬೆಳ್ಳಿ ದರ ಹೇಗಿದೆ ಇಲ್ಲಿದೆ ವಿವರ.

ಚಿನ್ನದ ದರ ಏರಿಕೆ
ಚಿನ್ನದ ದರ ದಿನೇ ದಿನೇ ಭಾರೀ ಏರಿಕೆಯಾಗುತ್ತಿದ್ದು ಕೆಲವೇ ದಿನಗಳಲ್ಲಿ 1 ಲಕ್ಷ ರೂ. ತಲುಪಲಿದೆ. ಈ ಪರಿ ಬೆಲೆ ಏರಿಕೆ ಗಮನಿಸಿದರೆ ಮಧ್ಯಮ ವರ್ಗದ ಜನ ಚಿನ್ನ ಕೊಳ್ಳುವುದೂ ಕನಸಾಗಲಿದೆ.

ದೆಹಲಿಯಲ್ಲಂತೂ ಚಿನ್ನ ಸರ್ವಕಾಲಿಕ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 1,300 ರೂ. ಏರಿಕೆಯಾಗಿದೆ. ಅಮೆರಿಕಾ ಅನುಸರಿಸುತ್ತಿರುವ ಸುಂಕ ನೀತಿಯ ಪರಿಣಾಮ ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಆದರೆ ಬೆಂಗಳೂರಿನಲ್ಲಿ ಚಿನ್ನ ದರದ ಸ್ಥಿರವಾಗಿದೆ. ಇಂದು  22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 8,325 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದ 8,741 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿಯ ದರವೂ ಚಿನ್ನಕ್ಕೆ ಪೈಪೋಟಿ ನೀಡುತ್ತಿದೆ. ಆದರೆ ಇಂದು ಬೆಳ್ಳಿ ಬೆಲೆಯಲ್ಲೂ ಸ್ವಲ್ಪ ಇಳಿಕೆಯಾಗಿದೆ. ಬೆಳ್ಳಿ ಬೆಲೆ ನಿನ್ನೆ ಪ್ರತೀ ಗ್ರಾಂಗೆ 102.80 ರೂ.ಗಳಷ್ಟಿತ್ತು. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.


Share this Story:

Follow Webdunia kannada

ಮುಂದಿನ ಸುದ್ದಿ

Mysuru Rain: ಮೈಸೂರಿಗೆ ಮೊದಲ ಮಳೆಯ ಸಂಭ್ರಮದ ಜೊತೆಗೆ ಆಪತ್ತು