Select Your Language

Notifications

webdunia
webdunia
webdunia
Friday, 28 March 2025
webdunia

Mysuru Rain: ಮೈಸೂರಿಗೆ ಮೊದಲ ಮಳೆಯ ಸಂಭ್ರಮದ ಜೊತೆಗೆ ಆಪತ್ತು

Mysore

Krishnaveni K

ಮೈಸೂರು , ಮಂಗಳವಾರ, 18 ಮಾರ್ಚ್ 2025 (09:09 IST)
Photo Credit: X
ಮೈಸೂರು: ರಾಜ್ಯದಲ್ಲಿ ವಿಪರೀತ ಬಿಸಿಲಿನ ನಡುವೆ ಅಲ್ಲಲ್ಲಿ ಮಳೆಯ ಸಿಂಚನವಾಗುತ್ತಿದೆ. ನಿನ್ನೆ ಸಂಜೆ ಮೈಸೂರಿನಲ್ಲಿ ಸುರಿದ ಭಾರೀ ಮಳೆಯಿಂದ ಸಂಭ್ರಮ ಒಂದೆಡೆಯಾದರೆ ಆಪತ್ತು ಕೂಡಾ ಬಂದಿದೆ.
 

ಮೈಸೂರಿಗೆ ಇದು ಕಳೆದ ಒಂದು ವಾರದಲ್ಲಿ ಎರಡನೇ ಮಳೆ. ಸತತ ಬಿಸಿಲಿನ ನಡುವೆ ನಿನ್ನೆ ಸಂಜೆ ಮೈಸೂರಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹಲವೆಡೆ ರೈತರು ಬೆಳೆದ ಬೆಳೆ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಿಂದ ಬೆಳೆದ ಬೆಳೆ ನೆಲಕಚ್ಚಿದೆ. ಅಕಾಲಿಕ ಮಳೆ ರೈತರಿಗೆ ಸಂಕಷ್ಟ ತಂದೊಡ್ಡಿದೆ.

ಇನ್ನು, ಇಂದೂ ಕೂಡಾ ಮೈಸೂರಿನಲ್ಲಿ ಮಳೆಯ ಸೂಚನೆಯಿದೆ. ನಿನ್ನೆ ಮೈಸೂರಿನಲ್ಲಿ ಮಳೆಯ ಪರಿಣಾಮ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿತ್ತು. ಆದರೆ ಬೆಂಗಳೂರಿಗೆ ಮಳೆಯ ಸೂಚನೆಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದ ಈ ಜಿಲ್ಲೆಗಳಿಗೆ ಮಳೆ, ಹವಾಮಾನ ಬದಲಾವಣೆ ಗಮನಿಸಿ