Select Your Language

Notifications

webdunia
webdunia
webdunia
webdunia

Earthquake: ಮ್ಯಾನ್ಮಾರ್ ನಲ್ಲಿ ಭೀಕರ ಭೂಕಂಪ: ಗಗನಚುಂಬಿ ಕಟ್ಟಡಗಳು ನೆಲಕ್ಕುರುಳುತ್ತಿರುವ ವಿಡಿಯೋ

Earthquake

Krishnaveni K

ಬ್ಯಾಂಕಾಕ್ , ಶುಕ್ರವಾರ, 28 ಮಾರ್ಚ್ 2025 (14:05 IST)
Photo Credit: X
ಬ್ಯಾಂಕಾಕ್: ಮ್ಯಾನ್ಮಾರ್, ಬ್ಯಾಂಕಾಕ್ ನಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೇ ಗಗನಚುಂಬಿ ಕಟ್ಟಡಗಳು ಧರೆಗುರುಳುತ್ತಿರುವ ವಿಡಿಯೋಗಳು ಎದೆ ಝಲ್ಲೆನಿಸುವಂತಿದೆ.

ಇಂದು ಬೆಳಿಗ್ಗೆ ಸುಮಾರು 11.50 ರ ಸುಮಾರಿಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ ಸುಮಾರು 43 ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಎರಡು ಬಾರಿ ಭೂಮಿ ಕಂಪಿಸಿದೆ. ಮೊದಲು 11.50 ಕ್ಕೆ ನಂತರ ಮತ್ತೊಮ್ಮೆ ಮಧ್ಯಾಹ್ನ 12. 50 ರ ಸುಮಾರಿಗೆ ಭೂಮಿ ಕಂಪಿಸಿದ್ದು 6.8 ತೀವ್ರತೆ ದಾಖಲಾಗಿದೆ. ಮ್ಯಾನ್ಮಾರ್ ನಲ್ಲಿ ಸಂಭವಿಸಿದ ಭೂಕಂಪ ಪಕ್ಕದ ಬ್ಯಾಂಕಾಕ್ ನಲ್ಲೂ ಅನುಭವಕ್ಕೆ ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಬಲ ಭೂಕಂಪಕ್ಕೆ ಮ್ಯಾನ್ಮಾರ್‌ ತತ್ತರ: ಗಗನಚುಂಬಿ ಕಟ್ಟಡಗಳು ನೆಲಸಮ, ಭಯಾನಕ ವಿಡಿಯೋ ಇಲ್ಲಿದೆ