ಬೆಂಗಳೂರು: ಚಿನ್ನ ಖರೀದಿ ಮಾಡಬೇಕು ಎಂದುಕೊಂಡವರಿಗೆ ಈಗ ಹಳದಿ ಲೋಹದ ಬೆಲೆ ಕೇಳಿಯೇ ಶಾಕ್ ಆಗಬಹುದು. ಕಳೆದ ಎರಡು ದಿನಗಳಿಂದ ಚಿನ್ನದ ದರ ಭಾರೀ ಏರಿಕೆಯಾಗಿದೆ. ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಾಗಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಯುಗಾದಿ ಹಬ್ಬಕ್ಕೆ ಚಿನ್ನ ಖರೀದಿ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿಯೇ ಬೆಲೆಯೂ ಗಗನಕ್ಕೇರಿದೆ. ನಿನ್ನೆಯೂ ಪರಿಶುದ್ಧ ಚಿನ್ನದ ದರ ಏರಿಕೆಯಾಗಿ 91,365 ರೂ.ಗಳಷ್ಟಿತ್ತು. ಇಂದೂ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಇಂದಂತೂ 91,930 ರೂ.ಗಳಷ್ಟಾಗಿದೆ. ಇನ್ನೀಗ ಚಿನ್ನದ ಬೆಲೆ ಲಕ್ಷದ ಗಡಿ ತಲುಪಲು ಕೆಲವೇ ಹೆಜ್ಜೆ ಬಾಕಿ.
22,24 ಮತ್ತು 18 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆಯಲ್ಲೂ ಸತತ ನಾಲ್ಕನೇ ದಿನ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 20 ರೂ. ಏರಿಕೆಯಾಗಿದ್ದು 8,360 ರೂ. ರಷ್ಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 22 ರೂ. ಏರಿಕೆಯಾಗಿದ್ದು 9,120 ರೂ. ಗಳಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 16 ರೂ. ಏರಿಕೆಯಾಗಿದ್ದು ಇಂದು ಗ್ರಾಂಗೆ 6,840 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರದಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ನಿನ್ನೆ ಪ್ರತೀ ಕೆ.ಜಿ.ಗೆ 3,000 ರೂಗಳಷ್ಟು ಏರಿಕೆಯಾಗಿತ್ತು. ಇದರಿಂದಾಗಿ 1,05,000 ರೂ.ಗಳಿಗೆ ಬಂದು ತಲುಪಿತ್ತು. ಆದರೆ ಇಂದು 1,000 ರೂ.ಗಳಷ್ಟು ಇಳಿಕೆಯಾಗಿದೆ. ಇಂದು ಬೆಳ್ಳಿ ಬೆಲೆ ಪ್ರತೀ ಕೆ.ಜಿ.ಗೆ 1,04,000 ರೂ.ಗಳಷ್ಟು ಬೆಲೆಯಿದೆ.