ಬೆಂಗಳೂರು: ಬಿಜೆಪಿಯಿಂದ ಆರು ವರ್ಷಗಳಿಗೆ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಉಚ್ಛಾಟನೆ ಮಾಡಿದ ಬೆನ್ನಲ್ಲೇ ಈಗ ಅವರ ಬೆಂಬಲಿಗ ಶಾಸಕರು, ರೆಬೆಲ್ ನಾಯಕರು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ.
ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದ ಯತ್ನಾಳ್ ಗೆ ಮೊದಲಿನಿಂದಲೂ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಕೆಲವು ಭಿನ್ನ ನಾಯಕರ ಬೆಂಬಲವಿತ್ತು. ಒಟ್ಟಾಗಿಯೇ ರಾಜ್ಯ ಬಿಜೆಪಿ ನಾಯಕತ್ವ ಬದಲಾಗಬೇಕು ಎಂದು ಆಗ್ರಹಿಸುತ್ತಿದ್ದರು.
ಇದೀಗ ಯತ್ನಾಳ್ ರನ್ನು ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ ಈ ನಾಯಕರೆಲ್ಲರೂ ಒಗ್ಗಟ್ಟಾಗಿದ್ದಾರೆ. ನಾಳೆ ಭಿನ್ನ ನಾಯಕರು ಸಭೆ ಸೇರುವ ನಿರ್ಧಾರ ಮಾಡಿದ್ದಾರೆ. ಮುಂದಿನ ನಡೆಯೇನು ಎಂದು ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಿದ್ದಾರೆ.
ಯತ್ನಾಳ್ ಒಬ್ಬಂಟಿಯಲ್ಲ ಅವರ ಜೊತೆಗೆ ನಾವಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಈ ನಾಯಕರು ಯತ್ನಾಳ್ ಉಚ್ಛಾಟನೆ ಆದೇಶವನ್ನು ಹಿಂಪಡೆಯಲು ಹೈಕಮಾಂಡ್ ಗೆ ಒತ್ತಡ ಹೇರುತ್ತಾ ಅಥವಾ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾತುಕತೆ ಮಾಡುತ್ತಾರಾ ಕಾದುನೋಡಬೇಕಿದೆ.