ಬೆಂಗಳೂರು: ಮೊನ್ನೆಯಷ್ಟೇ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಇಂದು ಮಾಧ್ಯಮಗಳು ಕಾಂಗ್ರೆಸ್ ಸೇರುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅವರು ಸಿಟ್ಟಿಗೆದ್ದಿದ್ದಾರೆ.
ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ಯತ್ನಾಳ್ ಮುಂದಿನ ನಡೆಯೇನು ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ. ಈಗಾಗಲೇ ಯತ್ನಾಳ್ ಯಾವುದೇ ಕಾರಣಕ್ಕೂ ಉಚ್ಛಾಟನೆ ಹಿಂಪಡೆಯುವಂತೆ ಹೈಕಮಾಂಡ್ ಮುಂದೆ ಕೈ ಕಟ್ಟಿಕೊಂಡು ನಿಲ್ಲಲ್ಲ ಎಂದಿದ್ದರು.
ಇದರ ನಡುವೆ ಕೆಲವರು ಅವರು ಕಾಂಗ್ರೆಸ್ ಸೇರಬಹುದು ಎಂದು ಪುಕಾರು ಹಬ್ಬಿಸಿದ್ದರು. ಈ ಬಗ್ಗೆ ಇಂದು ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಕೆಂಡಾಮಂಡಲರಾದರು. ಯಾವುದೇ ಕಾರಣಕ್ಕೂ ಮುಸಲ್ಮಾನರ ಕಾಂಗ್ರೆಸ್ ಪಕ್ಷ ಸೇರಲ್ಲ ಎಂದಿದ್ದಾರೆ.
ಈ ಜನ್ಮದಲ್ಲಿ ನಾನು ಕಾಂಗ್ರೆಸ್ ಸೇರಲ್ಲ. ಅದು ಮುಸಲ್ಮಾನರ ಪಕ್ಷ ಎಂದಿದ್ದಾರೆ. ಇನ್ನು, ಕೊರೋನಾ ಹಗರಣದಲ್ಲಿ ಯಡಿಯೂರಪ್ಪ ಮತ್ತು ಮಕ್ಕಳು ಕೋಟಿ ಕೋಟಿ ಹಣ ಗಳಿಸಿದ್ದಾರೆ. ಡಿಕೆಶಿ ಜೊತೆ ಸೇರಿಕೊಂಡು ವಿಜಯೇಂದ್ರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತೇನೆ. ರಾಯಣ್ಣ ಹಾಗೂ ಅಂಬೇಡ್ಕರ್ ಸೇರಿ ಹೊಸ ಪಕ್ಷ ಕಟ್ಟುತ್ತೇನೆ ಎಂದಿದ್ದಾರೆ.