Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ ಯಾವಾಗ: ಇಲ್ಲಿದೆ ವಿವರ

Results

Krishnaveni K

ಬೆಂಗಳೂರು , ಸೋಮವಾರ, 31 ಮಾರ್ಚ್ 2025 (16:06 IST)
ಬೆಂಗಳೂರು: ಇತ್ತೀಚೆಗಷ್ಟೇ ದ್ವಿತೀಯ ಪಿಯು ಪರೀಕ್ಷೆಗಳು ಮುಗಿದಿದ್ದು ಫಲಿತಾಂಶ ಯಾವಾಗ ಬರುತ್ತದೋ ಎಂದು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕೆ ಇಲ್ಲಿದೆ ಉತ್ತರ.

ದ್ವಿತೀಯ ಪಿಯು ಪರೀಕ್ಷೆಗಳು ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದಿತ್ತು. ಈ ಪರೀಕ್ಷೆಗಳ ಫಲಿತಾಂಶ ಏಪ್ರಿಲ್ ಎರಡನೇ ವಾರದಲ್ಲಿ ಘೋಷಣೆಯಾಗಲಿದೆ ಎನ್ನಲಾಗಿದೆ. ಮುಂದಿನ ವಾರದಲ್ಲಿ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.

ಎಂದಿನಂತೆ ಈ ಬಾರಿಯೂ kseab.karnataka.gov.in. ಎಂಬ ವೆಬ್ ಸೈಟ್ ನಲ್ಲಿ ಪರೀಕ್ಷೆ ಫಲಿತಾಂಶ ಪಡೆಯಬಹುದಾಗಿದೆ. ಇದೇ ವೆಬ್ ಸೈಟ್ ನಲ್ಲಿ ಅಂಕಪಟ್ಟಿಯ ಪಿಡಿಎಫ್ ಕಾಪಿ ಡೌನ್ ಲೋಡ್ ಮಾಡಲೂ ಅವಕಾಶವಿರಲಿದೆ.

ಪರೀಕ್ಷೆ ಫಲಿತಾಂಶ ಪಡೆಯಲು ವಿದ್ಯಾರ್ಥಿಯ ಹೆಸರು, ರೋಲ್ ನಂಬರ್, ಜನ್ಮ ದಿನಾಂಕ, ವಿವರ ಬೇಕಾಗುತ್ತದೆ. ಅಧಿಕೃತವಾಗಿ ಕರ್ನಾಟಕ ಪಿಯು ಬೋರ್ಡ್ ಸದ್ಯದಲ್ಲೇ ಫಲಿತಾಂಶ ಪ್ರಕಟ ದಿನಾಂಕ ಪ್ರಕಟಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈದ್ ಮಿಲಾದ್ ಪ್ರಾರ್ಥನೆಗೆ ಎಂದಿನಂತೆ ಸಿಎಂ ಸಿದ್ದರಾಮಯ್ಯ ಯಾಕೆ ಬರ್ಲಿಲ್ಲ: ಜಮೀರ್ ಹೇಳಿದ್ರು ಕಾರಣ