Publish Date: Mon, 15 Mar 2021 (12:41 IST)
Updated Date: Mon, 15 Mar 2021 (12:43 IST)
ಮೈಸೂರು : ಹೆಚ್.ಡಿ.ಕೆ ಬರೀ ಜಿಟಿಡಿ ಬೇರು ತೆಗೆಯುತ್ತಿಲ್ಲ. ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ ಎಂದು ಎಚ್.ಡಿ.ಕೆ ವಿರುದ್ಧ ಜಿ.ಟಿ.ದೇವೇಗೌಡ ಗುಡುಗಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ನಾನು ಆಲದ ಮರ ಅಂತ ಕರೆದುಕೊಂಡಿಲ್ಲ. ಆದರೂ ನನ್ನ ವಿರುದ್ಧ ಮಾತಾಡುತ್ತಿದ್ದೀರಿ. ನನ್ನನ್ನು ವಜಾ ಮಾಡ್ತೀನಿ ಅಂತೀರಾ. ಪದೇ ಪದೇ ಯಾಕೆ ನನ್ನ ಬಗ್ಗೆ ಮಾತಾಡ್ತೀರಿ? ಯಾಕೆ ನನ್ನ ಮರ್ಯಾದೆ ತೆಗೆಯುತ್ತೀರಿ. ಅಂತಹದ್ದು ನಾನು ಏನು ಮಾಡಿದ್ದೇನೆ? ಹೆಚ್.ಡಿ.ಕೆ. ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಶಕುನಿ, ಮಂಥರೆ ಮಾತು ಕೇಳಬೇಡಿ. ಶಕುನಿ ಕೌರವನ ಜೊತೆ ಸೇರಿ ಇಡೀ ವಂಶ ನಾಶ ಮಾಡಿದ. ಮಂಥರೆ ರಾಮನನ್ನು ಕಾಡಿಗೆ ಕಳುಹಿಸಿದಳು. ನೀವು 2 ಬಾರಿ ಸಿಎಂ ಆಗಿದ್ದವರು. ಅವರು ಹೇಳಿದ್ದನ್ನು ಕಾಪಿ ಮಾಡಬೇಡಿ. ನಿಮ್ಮ ನಾಯಕತ್ವಕ್ಕೆ ಬೆಲೆ ಇದೆ ಎಂದು ಅವರು ಎಚ್.ಡಿ.ಕೆಗೆ ಸಲಹೆ ನೀಡಿದ್ದಾರೆ.