Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವೀಲ್ ಚೇರ್ ನಲ್ಲೇ ಚುನಾವಣಾ ಪ್ರಚಾರ ನಡೆಸಲಿರುವ ಮಮತಾ ಬ್ಯಾನರ್ಜಿ

webdunia
ಭಾನುವಾರ, 14 ಮಾರ್ಚ್ 2021 (09:33 IST)
ಕೋಲ್ಕೊತ್ತಾ: ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ವೇಳೆ ಕಾಲಿಗೆ ಏಟು ಮಾಡಿಕೊಂಡಿರುವ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಇಂದು ಮತ್ತೆ ಪ್ರಚಾರ ಕಣಕ್ಕೆ ಮರಳಲಿದ್ದಾರೆ.


ಮಣಿಗಂಟಿಗೆ ಏಟು ಮಾಡಿಕೊಂಡಿರುವ ಮಮತಾ ವೀಲ್ ಚೇರ್ ನಲ್ಲಿ ಕುಳಿತೇ ಚುನಾವಣಾ ರ್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಟಿಎಂಸಿ ಮೂಲಗಳು ಹೇಳಿವೆ. ಇಂದು ಅಪರಾಹ್ನ ಹಝ್ರಾದಲ್ಲಿ ಅವರು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.

ಇನ್ನು, ಅವರ ಕಾಲಿಗೆ ಗಾಯವಾಗಿದ್ದು ಆಕಸ್ಮಿಕ ಅಪಘಾತವಷ್ಟೇ ಎಂದು ಮುಖ್ಯ ಕಾರ್ಯದರ್ಶಿಗಳು ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದರು. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ವಧು ಬೇಕಾಗಿದೆ ಎಂದು ಪೊಲೀಸ್ ಠಾಣೆಯ ಕದ ತಟ್ಟಿದ!