ಅಹಮ್ಮದಾಬಾದ್: ಪ್ರಧಾನಿ ಮೋದಿ ತಾಯಿ ಹೀರಾ ಬೆನ್ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನು ಸ್ವತಃ ಪ್ರಧಾನಿ ಮೋದಿಯೇ ತಮ್ಮ ಟ್ವಿಟರ್ ಪೇಜ್ ನಲ್ಲಿ ಘೋಷಿಸಿದ್ದಾರೆ.
ನನ್ನ ಅಮ್ಮ ಕೊರೋನಾದ ಮೊದಲ ಡೋಸ್ ಪಡೆದಿದ್ದಾಳೆ. ನಿಮ್ಮ ಸುತ್ತಮುತ್ತಲಿರುವವರಿಗೂ ಕೊರೋನಾ ಲಸಿಕೆ ಪಡೆಯಲು ಹುರಿದುಂಬಿಸಿ ಎಂದು ಮೋದಿ ಸಂದೇಶ ಬರೆದಿದ್ದಾರೆ.
60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲು ಪ್ರಾರಂಭಿಸಿದಾಗ ಪ್ರಧಾನಿ ಮೋದಿ ಖುದ್ದಾಗಿ ತಾವೇ ಮೊದಲಿಗರಾಗಿ ಲಸಿಕೆ ಪಡೆದುಕೊಂಡಿದ್ದರು. ಈಗ ಪ್ರಧಾನಿ ಮೋದಿಯ ಶತಾಯುಷಿ ಅಮ್ಮನೂ ಲಸಿಕೆ ಪಡೆದುಕೊಂಡಿದ್ದಾರೆ. ಮೋದಿ ಭಾರತ್ ಬಯೋಟೆಕ್ ನಿರ್ಮಿಸಿದ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದರು.