Publish Date: Sun, 14 Mar 2021 (07:59 IST)
Updated Date: Sun, 14 Mar 2021 (08:01 IST)
ಗಾಜಿಯಾಬಾದ್ :ಕುಡಿಯುವ ನೀರಿನ ವಿಚಾರಕ್ಕೆ ವ್ಯಕ್ತಿಯೊಬ್ಬ ಅಪ್ರಾಪ್ತ ಮುಸ್ಲಿಂ ಹುಡುಗನನ್ನು ನಿರ್ದಯವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ಸಂತ್ರಸ್ತನಿಗೆ ಬಾಯಾರಿಕೆಯಾದ ಹಿನ್ನಲೆಯಲ್ಲಿ ಆತ ನೀರು ಕುಡಿಯಲು ದೇವಾಲಯಕ್ಕೆ ಬಂದು ನೀರು ಕುಡಿದಿದ್ದಾನೆ. ಇದರಿಂದ ಕೋಪಗೊಂಡ ವ್ಯಕ್ತಿಯೊಬ್ಬ ಆತನನ್ನು ಕ್ರೂರವಾಗಿ ಥಳಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮಾಹಿತಿಯನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.