Publish Date: Wed, 17 Feb 2021 (08:58 IST)
Updated Date: Wed, 17 Feb 2021 (09:00 IST)
ಬೆಂಗಳೂರು: ರಾಜಕುಮಾರ ಸಿನಿಮಾದಲ್ಲಿ ಬೊಂಬೆ ಹೇಳುತೈತೆ ಎಂಬ ಹಾಡು ಪುನೀತ್ ರಾಜಕುಮಾರ್ ಅವರ ಎವರ್ ಗ್ರೀನ್ ಹಾಡುಗಳಲ್ಲಿ ಮೊದಲನೇ ಸಾಲಿನಲ್ಲಿ ನಿಲ್ಲುತ್ತದೆ. ಅಂತಹದ್ದೇ ಒಂದು ಅದ್ಭುತ ಹಾಡು ಯುವರತ್ನ ಸಿನಿಮಾದಲ್ಲಿದೆಯಂತೆ.
ಆ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಈ ಹಾಡು ಕೇಳುತ್ತಿದ್ದರೆ ಕಣ್ಣಲ್ಲಿ ನೀರೇ ಬರುತ್ತದೆ. ಅಂತಹ ಅದ್ಭುತ ಹಾಡಿದು. ಈ ಹಾಡು ಸಾಧ‍್ಯವಾಗಿದ್ದು ಪುನೀತ್ ರಾಜಕುಮಾರ್, ಸಂತೋಷ್ ಆನಂದ್ ರಾಮ್ ಅವರಿಂದ. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಂಗೀತ ನಿರ್ದೇಶಕ ತಮನ್ ಹೇಳಿಕೊಂಡಿದ್ದಾರೆ. ಇನ್ನು, ನಿರ್ಮಾಪಕ ಕಾರ್ತಿಕ್ ಗೌಡ ಕೂಡಾ ಇದು ಮತ್ತೊಂದು ರಾಜಕುಮಾರ ಹಾಡಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇಂತಹದ್ದೊಂದು ಅದ್ಭುತ ಹಾಡಿನ ಲಾಂಚ್ ಯಾವಾಗ ಎಂದು ಚಿತ್ರತಂಡ ಸದ್ಯದಲ್ಲೇ ಪ್ರಕಟಿಸಲಿದೆ.