Select Your Language

Notifications

webdunia
webdunia
webdunia
webdunia

ಕ್ಯಾಂಪಸ್ ನಲ್ಲೇ ಪ್ರಪೋಸ್ ಮಾಡಿದ್ದಕ್ಕೆ ಯುವ ಜೋಡಿ ಕಾಲೇಜಿನಿಂದ ಡಿಬಾರ್

ಕ್ಯಾಂಪಸ್ ನಲ್ಲೇ ಪ್ರಪೋಸ್ ಮಾಡಿದ್ದಕ್ಕೆ ಯುವ ಜೋಡಿ ಕಾಲೇಜಿನಿಂದ ಡಿಬಾರ್
ಲಾಹೋರ್ , ಸೋಮವಾರ, 15 ಮಾರ್ಚ್ 2021 (09:03 IST)
ಲಾಹೋರ್: ಕಾಲೇಜು ಕ್ಯಾಂಪಸ್ ನಲ್ಲೇ ಲವ್ ಪ್ರಪೋಸ್ ಮಾಡಿ ಪರಸ್ಪರ ತಬ್ಬಿಕೊಂಡು ಮುತ್ತಿಕ್ಕಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಲಾಹೋರ್ ವಿವಿ ಡಿಬಾರ್ ಶಿಕ್ಷೆ ನೀಡಿದೆ.


ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವತಿ ಮೊಣಕಾಲೂರಿ ಹೂವಿನ ಬೊಕೆ ನೀಡಿ ಯುವಕನಿಗೆ ಪ್ರಪೋಸ್ ಮಾಡುತ್ತಾಳೆ. ಈ ವೇಳೆ ಯುವಕ ತನ್ನ ಪ್ರೇಯಸಿಯನ್ನು ತಬ್ಬಿಕೊಳ್ಳುತ್ತಾನೆ. ಇದಕ್ಕೆ ಸುತ್ತಲಿದ್ದವೂ ಚಿಯರ್ ಅಪ್ ಮಾಡುತ್ತಿರುತ್ತಾರೆ.

ಈ ತಪ್ಪಿಗೆ ಇಬ್ಬರನ್ನೂ ಪ್ರಾಧ್ಯಾಪಕರು ಮೀಟಿಂಗ್ ಕರೆದು ಮಾತುಕತೆ ನಡೆಸಲು ನೋಟಿಸ್ ನೀಡಿದ್ದರು. ಆದರೆ ಇಬ್ಬರೂ ಮೀಟಿಂಗ್ ಗೆ ಗೈರಾಗಿದ್ದರು. ಹೀಗಾಗಿ ವಿವಿ ಇಬ್ಬರನ್ನೂ ಕಾಲೇಜಿನಿಂದ ಕಿತ್ತು ಹಾಕಿ ಶಿಕ್ಷೆ ನೀಡಿದೆ. ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಧವೆಯ ಮೇಲೆ ಸಾಮೂಹಿಕ ಮಾನಭಂಗ