Select Your Language

Notifications

webdunia
webdunia
webdunia
webdunia

ಸರ್ಕಾರದ ‌ಪಾಪದ ಕೊಡ ತುಂಬಿದ್ದು, ಶೀಘ್ರದಲ್ಲೇ ಸಿಎಂ ರಾಜೀನಾಮೆ: ವಿಜಯೇಂದ್ರ ಭವಿಷ್ಯ

ಸರ್ಕಾರದ ‌ಪಾಪದ ಕೊಡ ತುಂಬಿದ್ದು, ಶೀಘ್ರದಲ್ಲೇ ಸಿಎಂ ರಾಜೀನಾಮೆ: ವಿಜಯೇಂದ್ರ ಭವಿಷ್ಯ

Sampriya

ಬಳ್ಳಾರಿ , ಭಾನುವಾರ, 10 ನವೆಂಬರ್ 2024 (13:39 IST)
ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ‌ಪಾಪದ ಕೊಡ ತುಂಬಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳು ಗೆದ್ದಾಗ ಸಿಎಂ ನಿರಾಳವಾಗಿದ್ದರು. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಹಗರಣಗಳನ್ನು ಬಿಜೆಪಿ ಒಂದೊಂದು ಬಯಲಿಗೆ ಎಳೆಯುತ್ತಿದ್ದಂತೆ ಸಿದ್ದರಾಮಯ್ಯ ಆತಂಕದಲ್ಲಿ ಇದ್ದಾರೆ ಎಂದು ಜಿಂದಾಲ್ ವಿದ್ಯಾನಗರದಲ್ಲಿ ಭಾನುವಾರ ತಿಳಿಸಿದರು.

ರಾಜ್ಯದಲ್ಲಿ ಅಸಮರ್ಥ ಸಿಎಂಯೊಬ್ಬರು ಆಡಳಿತ‌ ನಡೆಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ಮುಕ್ತ ಮಾಡುತ್ತವೆ ಎಂದು ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ, ಸಾಲು ಸಾಲು ಹಗರಣಗಳಿಂದ ಒಂದೂವರೆ ವರ್ಷದಲ್ಲಿಯೇ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ ಎಂದು ಟೀಕಿಸಿದರು.

ಹದಿನೈದು ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಎ1 ಆರೋಪಿಯಾಗಿ ಅಪರಾಧಿ ಸ್ಥಾನದಲ್ಲಿ‌ ನಿಂತಿದ್ದಾರೆ. ಮುಡಾ ಕಮಿಷನರ್ ದಿನೇಶ್ ಎಂಬ ಅಧಿಕಾರಿಯನ್ನು ಸ್ವತಃ ಸಿಎಂ ಬಚ್ಚಿಟ್ಟಿದ್ದಾರೆ ಎಂದು ದೂರಿದರು.

ಕೋವಿಡ್ ಅಕ್ರಮದ ಬಗ್ಗೆ ನ್ಯಾ. ಮೈಕಲ್ ಕುನ್ಹಾ ಮಧ್ಯಂತರ 14 ಪುಟದ ವರದಿಯಲ್ಲಿ ಹದಿನಾಲ್ಕು ಕೋಟಿ ರೂ. ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ವರದಿಯಿಂದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಶ್ರೀರಾಮುಲು ಅವರನ್ನು ಬೆದರಿಸಲು ಹೊರಟಿದ್ದಾರೆ. ಆದರೆ, ಯಡಿಯೂರಪ್ಪ ಅವರ ತಾಕತ್ತು ಕಾಂಗ್ರೆಸ್ ‌ನಾಯಕರಿಗಿಂತ ಸಿದ್ದರಾಮಯ್ಯ ಅವರಿಗೆ ಹೆಚ್ಚು ಗೊತ್ತು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಚುನಾವಣೆ: ರೈತರ ಸಾಲ ಮನ್ನಾ ಸೇರಿ ಭರಪೂರ ಭರವಸೆ ನೀಡಿದ ಬಿಜೆಪಿ ಪ್ರಣಾಳಿಕೆ