Select Your Language

Notifications

webdunia
webdunia
webdunia
webdunia

ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌ ಆರೋಪ ಮಾಡುತ್ತಿದೆ: ಬಿವೈ ಯಡಿಯೂರಪ್ಪ

Karnataka By Election 2024, Covid 10 Scam, BJP Leader BY Vijayendra

Sampriya

ಹುಬ್ಬಳ್ಳಿ , ಭಾನುವಾರ, 10 ನವೆಂಬರ್ 2024 (12:11 IST)
Photo Courtesy X
ಹುಬ್ಬಳ್ಳಿ: ಕರ್ನಾಟಕ  ಮೂರು ಉಪಚುನಾವಣೆ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಸೋಲುವ ಭೀತಿ ಕಾಡುತ್ತಿದ್ದು, ಇದರಿಂದ ಕೋವಿಡ್ ಸಂದರ್ಭ ಬಿಜೆಪಿ ಹಗರಣದ ನಡೆಸಿದೆ ಎಂದು ಆರೋಪ ಮಾಡುತ್ತಿದೆ ಎಂದು ಬಿಜೆಪಿ ಸಂದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಉಪ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಈ ಎಲ್ಲ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇವೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಹೇಳಿಕೆ ನೀಡುತ್ತಾರೆ ಎಂದು ನೋಡೋಣ ಎಂದು ಹೇಳಿದರು.

'ಶಿಗ್ಗಾವಿ, ಚನ್ನಪಟ್ಟಣ, ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ ಮಾಡಿದ್ದು, ಇನ್ನೂ ಸಂಡೂರಿನಲ್ಲಿ  ನಾಲ್ಕು-ಐದು ದಿನ ಬೀಡು ಬಿಟ್ಟು ಪ್ರಚಾರ ನಡೆಸಿದ್ದಾರೆ. ಅವರಿಗೆ ಸೋಲಿನ ಭಯ ಶುರುವಾಗಿದ್ದು, ಎಷ್ಟೇ ಪ್ರಯತ್ನ ಮಾಡಿದ್ದರೂ ಕಾಂಗ್ರೆಸ್‌ಗೆ ಸೋಲು ಖಚಿತ ಎಂದರು.

ಭ್ರಷ್ಟ‌ ಸರ್ಕಾರದ ವಿರುದ್ಧ ಜನರು ಅಕ್ರೋಶಗೊಂಡಿದ್ದಾರೆ. ಚುನಾವಣಾ ಫಲಿತಾಂಶ ಬಂದ ನಂತರ ಸಿಎಂಗೆ ಅರ್ಥ ಆಗಲಿದೆ, ಈ ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿದ ಕಾರಣಕ್ಕೆ ಜನ ಹೇಗೆ ತಿರುಗಿ ಬಿದ್ದಿದ್ದಾರೆ ಎನ್ನುವುದು ಎಂದರು.

ಶಿಗ್ಗಾವಿಯಲ್ಲಿ ಸಿದ್ದರಾಮಯ್ಯ ಅವರು ಮೂರು, ನಾಲ್ಕು ದಿನ ಇದ್ದು ಪ್ರಚಾರ ನಡೆಸಿದರೂ ನಿರೀಕ್ಷಿತ ಜನ ಬೆಂಬಲ ಸಿಕ್ಕಿಲ್ಲ. ಹಣ ಕೊಟ್ಟು ಜನರನ್ನು ಕರೆದರು ಅಷ್ಟೂ ಜನ ಸೇರಲಿಲ್ಲ. ಇದರಿಂದ ಸಿಎಂ ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅಬಕಾರಿ ಇಲಾಖೆಯೊಂದರಲ್ಲಿಯೇ ಎಷ್ಟೊಂದು ಲೂಟಿ ಆಗಿದೆ ಎಂದು ಗುತ್ತುಗೆದಾರರೇ ಹೇಳುತ್ತಿದ್ದಾರೆ. ಇದೆಲ್ಲದರ ಪರಿಣಾಮ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಒಡಿಶಾ: ಆರೋಪಿಗಳ ಮುಖ ಮರೆಮಾಚಲು ಪೊಲೀಸರ ಕ್ರಿಯೇಟಿವ್ ಯೋಚನೆಗೆ ಎಲ್ಲರೂ ಫಿದಾ