Select Your Language

Notifications

webdunia
webdunia
webdunia
webdunia

ರೇವತಿಯನ್ನು ಚಾಮುಂಡೇಶ್ವರಿ ನಮ್ಮ ಮನೆಗೆ ಕಳುಹಿಸಿದ ಪ್ರಸಾದ: ಸೊಸೆ ಗುಣಗಾನ ಮಾಡಿದ ಕುಮಾರಸ್ವಾಮಿ

Channapattana By Election 2024

Sampriya

ಬೆಂಗಳೂರು , ಭಾನುವಾರ, 10 ನವೆಂಬರ್ 2024 (10:54 IST)
Photo Courtesy X
ಬೆಂಗಳೂರು: ರೇವತಿ ನಮಗೆ ಆ ತಾಯಿ ಚಾಮುಂಡೇಶ್ವರಿ ನಮ್ಮ ಮನೆಗೆ ಕೊಟ್ಟ ಪ್ರಸಾದ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸೊಸೆಯನ್ನು ಹಾಡಿಹೊಗಳಿದರು.

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆ, ಮಗ, ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಕುಮಾರಸ್ವಾಮಿ ಅವರು ಸಾಮಂದಿಪುರದಲ್ಲಿ ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಸೊಸೆ ರೇವತಿ ಸಾಮಂದಿಪುರದ ಮೊಮ್ಮಗಳು. ನಮಗೂ ಈ ಗ್ರಾಮಕ್ಕೂ ಬಾಂಧವ್ಯ ಇದೆ ಎಂದರು.

ಈ ಗ್ರಾಮವು ಅವರ ಸೊಸೆ ತಿ ಅವರ ಅಜ್ಜಿಯ ತವರು ಮನೆ. ರೇವತಿ ಅವರು ಆ ಹಳ್ಳಿಯ ಮೊಮ್ಮಗಳು. ಈ ವಿಷಯವನ್ನು ಸಭಿಕರೊಬ್ಬರು ಸಚಿವರಿಗೆ ನೆನಪಿಸಿಕೊಟ್ಟರು. ಈ ವಿಷಯ ಗಮನಕ್ಕೆ ಬರುತ್ತಿದ್ದ ಹಾಗೇ ಸೊಸೆಯನ್ನು ಗುಣಗಾನ ಮಾಡಿದ್ದಾರೆ.  

ಈ ವಿಷಯ ಗಮನಕ್ಕೆ ಬಂದ ಕೂಡಲೇ ಕ್ಷಣಕಾಲ ಭಾವುಕರಾದ ಹೆಚ್‌ ಡಿ ಕುಮಾರಸ್ವಾಮಿ ಅದು ಕೋವಿಡ್ ಸಮಯ ನಿಖಿಲ್ ಕುಮಾರಸ್ವಾಮಿ ಮದುವೆ ನಡೆಯಿತು. ಮಗನ ಮದುವೆಯಲ್ಲಿ ರಾಮನಗರ ಚನ್ನಪಟ್ಟಣ, ಮಂಡ್ಯ ಭಾಗದ ಎಲ್ಲಾ ಜನತೆಗೆ ಊಟ ಹಾಕಿಸಬೇಕೆಂಬ ಮಹಾದಾಸೆ ನನಗಿತ್ತು. ಆದರೆ ಕೊರೊನಾ ಕಾರಣಕ್ಕೆ ಅದು ಸಾಧ್ಯ ಆಗಲಿಲ್ಲ. ಆ ಬಗ್ಗೆ ನಮ್ಮ ಕುಟುಂಬಕ್ಕೆ ಅತೀವ ನೋವಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿರುವುದು ದೇವೇಗೌಡ್ರಲ್ಲ: ಜಮೀರ್ ಅಹ್ಮದ್‌