Select Your Language

Notifications

webdunia
webdunia
webdunia
webdunia

ಯೋಗೇಶ್ವರ್‌ಗೆ ಜನರ ಕಷ್ಟ ಗೊತ್ತು, ಆದ್ರೆ ದೇವೇಗೌಡರ ಕುಟುಂಬಕ್ಕೆ ಗೊತ್ತಿರುವುದು ಅಳುವುದಷ್ಟೇ: ಸಿದ್ದರಾಮಯ್ಯ

ಯೋಗೇಶ್ವರ್‌ಗೆ ಜನರ ಕಷ್ಟ ಗೊತ್ತು, ಆದ್ರೆ ದೇವೇಗೌಡರ ಕುಟುಂಬಕ್ಕೆ ಗೊತ್ತಿರುವುದು ಅಳುವುದಷ್ಟೇ: ಸಿದ್ದರಾಮಯ್ಯ

Sampriya

ಚನ್ನಪಟ್ಟಣ , ಬುಧವಾರ, 6 ನವೆಂಬರ್ 2024 (18:38 IST)
Photo Courtesy X
ಚನ್ನಪಟ್ಟಣ:  ವಿಧಾನಸಭಾ ಉಪಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಇಂದು ಕಾಂಗ್ರೆಸ್ ಅಭ್ಯರ್ಥಿ ಸಿಎಸ್ ಯೋಗೇಶ್ವರ್ ಪರ ಸಿಎಂ ಸಿದ್ದರಾಮಯ್ಯ ಕುಡ್ಲೂರು ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋತಿದ್ದ, ನಂತರ ರಾಮನಗರದಲ್ಲಿ ಸೋತಿದ್ದ ನಿಖಿಲ್ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು ಎಂದು ನಿಖಿಲ್‌ಗೆ ಹೇಳಿಕೊಟ್ಟಿದ್ದಾರೆ. ಸೋಲಿನ ಭಯ ಕಾಡುತ್ತಿದೆ ಅದಕ್ಕೆ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಯೋಗೇಶ್ವರ್ ಗೆಲ್ಲುವುದು ಶತಸಿದ್ಧ. ಮಾಜಿ ಪ್ರಧಾನಿ ದೇವೇಗೌಡರು ಮೂರ್ನಾಲ್ಕು ದಿನ ರಾಮನಗರದಲ್ಲಿ ಠಿಕಾಣಿ ಹೂಡಿದ್ದಾರೆ. ಏನಾದ್ರೂ ಮಾಡಿ ಮೊಮ್ಮಗನ್ನ ಗೆಲ್ಲಿಸ್ಬೇಕಂತೆ ಹೊರಟಿದ್ದಾರೆ ಎಂದರು.

 ಈ ಕ್ಷೇತ್ರಕ್ಕೆ ರೂ.220 ಕೋಟಿ ಅನುದಾನ ಕೊಟ್ಟವನು ನಾನು. ಬಿಜೆಪಿ ಅನುಮೋದನೆ ಕೊಟ್ಟು ಸುಮ್ಮನಾಗಿದ್ರು. ಯೋಗೇಶ್ವರ್ ಗೆ ಜನರ ಕಷ್ಟಸುಖ ಗೊತ್ತು. ದೇವೇಗೌಡರ ಕುಟುಂಬ ಇದು ಗೊತ್ತಿಲ್ಲ. ಅವರಿಗೆ ಭಾವನಾತ್ಮಕವಾಗಿ ಮಾತಾಡೋದು, ಅಳೋದು ಮಾತ್ರ ಗೊತ್ತು. ಚನ್ನಪಟ್ಟಣದ ಅಭಿವೃದ್ಧಿಗೆ ಯೋಗೇಶ್ವರ್ ಗೆಲ್ಲಬೇಕು ಎಂದು ಹೇಳಿದರು.

 ನಾನು ಈಗಾಗಲೇ ಕ್ಷೇತ್ರಕ್ಕೆ ರೂ.500 ಕೋಟಿಗೂ ಹೆಚ್ಚು ಕೊಟ್ಟಿದ್ದೀನಿ. ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಅನುದಾನ ಕೊಡ್ತೀನಿ. ಇನ್ನೂ ಮೂರುವರೆ ವರ್ಷ ನಮ್ಮ ಸರ್ಕಾರವೇ ಇರುತ್ತೆ, ಕುಮಾರಸ್ವಾಮಿ ಸರ್ಕಾರ ಬರಲ್ಲ. ಅನುದಾನ ಕೊಡೋದು ನಾನು, ಡಿ.ಕೆ. ಶಿವಕುಮಾರ್ ಎಂದರು.

ಕೂಲಿ ಮಾಡಿದ್ದೀವಿ, ಓಟ್ ಕೊಡಿ ಅಂತಿದೀವಿ. 5 ಗ್ಯಾರಂಟಿ ಯೋಜನೆ ಕೊಟ್ಡಿದೀವಲ್ವ ನಾವು? ಪ್ರತಿ ತಿಂಗಳು ಎರಡು ಸಾವಿರ ದುಡ್ಡು ಕೊಡ್ತಿರೋದು ನಾನಲ್ವ? ನಿಮಗೆ ಫ್ರೀಯಾಗಿ ಬಸ್ ನಲ್ಲಿ ಓಡಾಡೊ ಹಾಗೆ ಮಾಡಿದ್ದು ನಮ್ಮ ಸರ್ಕಾರ ಅಲ್ವಾ? ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ರಾ ಎಂದು ಪ್ರಶ್ನೆ ಮಾಡಿದರು.  

 ಅಳ ಗಂಡಸನ್ನ ನಂಬಬಾರ್ದು ಅಂತ ನಮ್ಮ ಕಡೆ ಒಂದು ಗಾಧೆ ಇದೆ. ಈ ಕುಮಾರಸ್ವಾಮಿ ಅಳುವ ಗಂಡಸು, ಯಾವತ್ತೂ ನಂಬಬೇಡಿ. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತಾ? ಕೆರೆ ನೀರು ತುಂಬುತ್ತಾ? ಜಮೀನಿಗೆ ನೀರು ಹರಿಯುತ್ತಾ ಎಂದು ವ್ಯಂಗ್ಯ ಮಾಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಹಸೆಮಣೆ ಏರಲು ಸಜ್ಜಾದ 'ಲಕ್ಷ್ಮಿ ನಿವಾಸ' ಜಾಹ್ನವಿ, ಚಿನ್ನುಮರಿ ಕೈ ಹಿಡಿಯುವ ಹುಡುಗ ಯಾರು ಗೊತ್ತಾ