Publish Date: Sun, 10 Nov 2024 (12:31 IST)
Updated Date: Sun, 10 Nov 2024 (12:34 IST)
ಬೇಗುಸರಾಯ್: ಬಿಹಾರದ ಬೇಗುಸರಾಯ್ನ ಬರೌನಿ ಜಂಕ್ಷನ್ನಲ್ಲಿ ರೈಲು ಎಂಜಿನ್ ಮತ್ತು ಕೋಚ್ ನಡುವೆ ಉದ್ಯೋಗಿಯೊಅಬ್ಬರು ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ರೈಲ್ವೆಯ ಡಿ ಗ್ರೂಪ ಉದ್ಯೋಗಿ ಅಮರ್ ಕುಮಾರ್ ರಾವ್ ಎಂದು ಗುರುತಿಸಲಾಗಿದೆ. ಅವರು ಸೋನ್ಪುರ್ ರೈಲ್ವೆ ವಿಭಾಗದ ಅಡಿಯಲ್ಲಿ ಬಂದರು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿವರಗಳ ಪ್ರಕಾರ, 15204 ಲಕ್ನೋ-ಬರೌನಿ ಎಕ್ಸ್ಪ್ರೆಸ್ ಲಕ್ನೋ ಜಂಕ್ಷನ್ನಿಂದ ಆಗಮಿಸುತ್ತಿದ್ದಂತೆ ಬರೌನಿ ಜಂಕ್ಷನ್ನ 5 ನೇ ಪ್ಲಾಟ್ಫಾರ್ಮ್ನಲ್ಲಿ ಕೋಚ್ ಅನ್ನು ಜೋಡಿಸುತ್ತಿದ್ದ ವೇಳೆ ಪ್ಲೇಟ್ಗಳ ಮಧ್ಯೆ ಸಿಲುಕಿ ಸಾವನ್ನಪ್ಪಿದರು.
ರೈಲಿನ ಜೋಡಣೆಯನ್ನು ತೆರೆಯಲು ರಾವ್ ಪ್ರಯತ್ನಿಸಿದಾಗ, ರೈಲು ಅನಿರೀಕ್ಷಿತವಾಗಿ ಹಿಮ್ಮುಖವಾಯಿತು ಮತ್ತು ಅವರು ಗಾಡಿಗಳ ನಡುವೆ ಸಿಲುಕಿಕೊಂಡರು. ಇದರಿಂದ ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮೃತಪಟ್ಟರು.