Select Your Language

Notifications

webdunia
webdunia
webdunia
webdunia

ಮಾಟ ಮಂತ್ರದಲ್ಲಿ ಡಿಕೆಶಿ ಫೇಮಸ್ ಮಾಟ ಮಂತ್ರದಿಂದ ಅಕ್ಕಿ ಪಡೆಯಿರಿ- ಆರ್ ಅಶೋಕ್

Get Rice by Dkeshi Famous Mata Mantra in Mata Mantra
bangalore , ಸೋಮವಾರ, 19 ಜೂನ್ 2023 (19:01 IST)
ಮಾಟ ಮಂತ್ರ ಮಾಡಿಸುವಲ್ಲಿ ಡಿಕೆ ಶಿವಕುಮಾರ್ ಫೇಮಸ್.ಅವ್ರೇ ಏನಾದ್ರು ಮಾಟ್ ಮಂತ್ರ ಮಾಡಿಸಿ ರಾಜ್ಯಕ್ಕೆ ಅಕ್ಕಿ ತರಿಸಲಿ ಎಂದು ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
 
ಕರ್ನಾಟಕದಲ್ಲಿ ಇರುವ ಎಡಬಿಡಂಗಿ ಸರ್ಕಾರ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತಿದೆ.ನಾವೆಲ್ಲ ಸಾಚಾ ಅಂತ ಓಡಾಡ್ತಿದ್ದಾರೆ.ಇಂದು ಕರ್ನಾಟಕದಲ್ಲಿ5k.g ಅಕ್ಕಿ ಕೊಡ್ತಿರೋದು ಕೇಂದ್ರ.ಯಾವುದೇ ಅಡೆ ತಡೆ ಇಲ್ಲದೆ ಕೊಡಲಾಗ್ತಿದೆ.ಹೆಚ್ಚುವರಿ ಅಕ್ಕಿ ಕೊಡ್ತೀವಿ ಅನ್ನೋದು ಅವರ ನಿರ್ಧಾರ.ಈಗ ಸ್ಟಾಕ್ ಇರೋದು ದೇಶದ ಎಲ್ಲರಿಗೂ ಕೊಡಬೇಕಿರೋದು‌.ಸದ್ಯ ಮುಂಗಾರು ಕೈಕೊಟ್ಟಿದೆ, ಮಳೆ ಮುಂದಕ್ಕೆ ಹೋಗಿದೆ.ಬೆಳೆ ಬರೋದು ಕೂಡ ತಡ ಆಗಲಿದೆ.ಸ್ಟಾಕ್ ಕ್ಲಿಯರ್ ಮಾಡಿದ್ರೆ, ಕೇಂದ್ರದಿಂದ ಮತ್ತೆ 5k.g ಕೂಡ ಮುಂದಿನ ದಿನದಲ್ಲಿ ಬರೋದಿಲ್ಲ.ಅದು ಬರದಿದ್ರೆ ಬೊಬ್ಬೆ ಹೊಡೆಯೋಕಾ.?FCI ಈಗಾಗಲೇ ಸ್ಟಾಕ್ ಬಗ್ಗೆ ಸ್ಪಷ್ಟಪಡಿಸಿದೆ.ಕಾಂಗ್ರೆಸ್ ಮಾತು ಕೊಟ್ಟುಬಿಟ್ರೆ, ಇರೋದು ಬರೋದಿಲ್ಲ.ಕಾಂಗ್ರೆಸ್ ಚುನಾವಣೆ ಗೆದ್ದಿದ್ದೇವೆ, ಚಾಣಾಕ್ಯ ತಂತ್ರ ಮಾಡಿದ್ದೇವೆ ಅಂತಾರೆ.
 
ಮಾಟ ಮಂತ್ರದಲ್ಲಿ ಡಿಕೆ ಶಿವಕುಮಾರ್ ಫೇಮಸ್ .ಮಾಟ ಮಂತ್ರ ಮಾಡಿ ಅಕ್ಕಿ ಪಡೆಯಿರಿ.ಹೆಚ್ಚುವರಿ ಇದೆ ಅಂದ್ರೆ ಅದು ಕಾಂಗ್ರೆಸ್ ನವರ ಮನೆಯಲ್ಲಿ ಇರಬಹುದು.ಕಾಂಗ್ರೆಸ್ ಇಲ್ಲ ಸಲ್ಲದ ಮಾತನ್ನ ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ.ದಯವಿಟ್ಟು ನಮ್ಮ ಮಾತು ಕೇಳಿ.ಅಕ್ಕಿ ಬಗ್ಗೆ ಯಾವುದೇ ರಾಜಕಾರಣ ಆಗಿಲ್ಲ, ಇವರೇ ಸುಳ್ಳು ಹೇಳಿರೋದು.ಈಗ ಬಸ್ ಕಿಟಕಿ, ಬಾಗಿಲು ಕೀಳುವ ಹಂತಕ್ಕೆ ಬಂದಿದೆ.ಸಿದ್ದರಾಮಯ್ಯ ಕೇಳಿದ್ರೆ ಸೇರಿಸಿ ಬಂದಿದೆ ಅಂತಿದ್ದಾರೆ.ಕರೆಂಟ್ ಕೊಡೋದ್ರಲ್ಲೇ ಸುಳ್ಳು ಹೇಳಿದ್ದಾರೆ.ಇನ್ನು ಅಕ್ಕಿ ಕೊಡೋದ್ರಲ್ಲೂ ಹೀಗೆ ಮಾಡ್ತಾರೆ‌ ಎಂದು ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಇವರಿಗೆ ಜನ ಬಾಯಿಗೆ ಬಂದಂತೆ ಉಗೀತಿದ್ದಾರೆ- ಬಸವರಾಜ್ ಬೊಮ್ಮಾಯಿ