Select Your Language

Notifications

webdunia
webdunia
webdunia
webdunia

ಜನರೇ ಕರೆಂಟ್​ ಬಿಲ್​ ಕಟ್ಬೇಡಿ., ಬಸ್​ ಟಿಕೆಟ್ ತಗೋಬೇಡಿ , ಆರ್ ಅಶೋಕ್

People
bangalore , ಶುಕ್ರವಾರ, 26 ಮೇ 2023 (20:20 IST)
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಬಗ್ಗೆ ಈಗ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜನರು ವಿದ್ಯುತ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕ ಆರ್​.ಅಶೋಕ್​​ ಸುದ್ದಿಗೋಷ್ಠಿಯಲ್ಲಿ ಮಾತನಮಾಡಿ, ಜನರೇ ಕರೆಂಟ್​ ಬಿಲ್​ ಕಟ್ಬೇಡಿ., ಬಸ್​ ಟಿಕೆಟ್ ತಗೋಬೇಡಿ, ಎಂದು ರಾಜ್ಯದ ಜನರಿಗೆ ಕರೆ ಕೊಟ್ಟಿದ್ದಾರೆ.ಗ್ಯಾರೆಂಟಿ ಜಾರಿ ಮಾಡದ ಸರ್ಕಾರದ ಮೇಲೆ ಬಿಜೆಪಿ ಭಾರಿ ಆಕ್ರೋಶ ಹೊರಹಾಕಿದೆ. ಮೊದಲ ಸಂಪುಟದಲ್ಲೇ ಜಾರಿ ಅಂದ್ರು.. ಇನ್ನೂ ಏಕೆ ಜಾರಿ ಮಾಡಿಲ್ಲ, ಇದು ಮಾತು ತಪ್ಪಿದ ಸರ್ಕಾರ ಎಂದು ಆರ್ .ಅಶೋಕ್ ಗುಡುಗಿದ್ದಾರೆ. ನಿಂಗೂ ಫ್ರೀ..ನಂಗೂ ಫ್ರೀ ಅಂದ್ರು.. ಈಗ ಕಂಡಿಷನ್ಸ್ ಹಾಕ್ತಿದ್ದಾರೆ.ಗ್ಯಾರೆಂಟಿ ಕೊಡಲು ಆಗದೇ ಮೈಂಡ್ ಡೈವರ್ಟ್ ಮಾಡ್ತಿದ್ದಾರೆ...ಭಜರಂಗದಳ, ಆರ್​​.ಎಸ್​.ಎಸ್​ ಬ್ಯಾನ್​​ ಅನ್ನೋ ವರೆಸೆ ತಗೆದಿದ್ದಾರೆ. ಕಾಂಗ್ರೆಸ್​ ನಾಯಕರು ತಾಕತ್ತಿದ್ದರೆ ಆರ್​ಎಸ್​ಎಸ್ ಬ್ಯಾನ್​ ಮಾಡಲಿ ಎಂದು ಆರ್​​.ಅಶೋಕ್ ಗುಡುಗಿದ್ದಾರೆ. ಮೂರು ತಿಂಗಳಲ್ಲಿ ಗೂಟದ ಕಾರು ವಿಧಾನಸೌಧದ ಮುಂದೆ ಆಲ್ಟ್ ಆಗ್ತವೆ, ಕಾಂಗ್ರೆಸಿಗರೇ ನಿಮ್ಮ ತಾತ, ಅಜ್ಜಿ, ಅಪ್ಪನ ಕೈಲೇ ಆಗಲಿಲ್ಲ. ಸೋತು ಸುಣ್ಣವಾಗಿರೋ ನೀವು RSS ಬ್ಯಾನ್ ಮಾಡ್ತೀರಾ..ಎಂದು ಬಿಜೆಪಿ ನಾಯಕ ಆರ್​.ಅಶೋಕ್​​ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ತಾಕತ್ತಿದ್ದರೆ ಆರ್​ಎಸ್​ಎಸ್ ಮತ್ತು ಬಜರಂಗದಳವನ್ನು ನಿಷೇಧಿಸಲಿ