Select Your Language

Notifications

webdunia
webdunia
webdunia
webdunia

ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ತಂಪೆರೆದ ವರುಣ

ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ತಂಪೆರೆದ ವರುಣ
bangalore , ಶನಿವಾರ, 20 ಮೇ 2023 (18:41 IST)
ನಗರದ ಹಲವಡೆ ಮಳೆಯಾಗಿದೆ.ಕಾರ್ಪೋರೇಶನ್, ಮಾರ್ಕೆಟ್, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ಸೇರಿ ಬಹುತೇಕ ಕಡೆ ಮಳೆಯ ಸಿಂಚನವಾಗಿದೆ.ಮುಂದಿನ ಎರಡು ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ.ಮೇ ೨೧ ಮತ್ತು ೨೨ರಂದು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಜೂನ್ ೬ರ ನಂತರ ರಾಜ್ಯದಲ್ಲಿ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ.
 
ಅಬ್ಬರದ ಮಳೆ ಸುರಿದ ಹಿನ್ನೆಲೆ ಆಟೋ ಮೇಲೆ  ಮರದ ಕೊಂಬೆ ಬೃಹತ್ ಗಾತ್ರದ ಮರ ಬಿದ್ದಿದೆ.ಕಾರ್ಪೋರೇಷನ್ ಬಳಿ ರಸ್ತೆ ಬದಿ ನಿಂತಿದ್ದ ಆಟೋ ಮೇಲೆ  ಮರದ ಕೊಂಬೆ ಉರುಳಿದೆ.ಆಟೋ ಟಾಪ್ ಸಂಪೂರ್ಣ ಹಾನಿಯಾಗಿದೆ.ಅದೃಷ್ಟವಶತ್ ಆಟೋ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.
 
ಗುಡುಗು ಮತ್ತು ಗಾಳಿ ಸಹಿತ ಸುರಿದ ಭಾರೀ ಮಳೆಗೆ ಬೆಂಗಳೂರು ನಲುಗಿದೆ.ಕಾರ್ಪೋರೇಷನ್ ಹತ್ತಿರದ ರಸ್ತೆಗಳಲ್ಲಿ ಧರೆಗೆ ಮರದ ರೆಂಬೆ ಕೊಂಬೆಗಳು ಉರುಳಿದೆ.ಫುಟ್ ಪಾಥ್ ಮೇಲೆ ತೆರಳಲು ಆಗದೆ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ಕೇಶವಿನ್ಯಾಸ ಮಾಡಿಸಿಕೊಂಡಿರುವ ಅಭಿಮಾನಿ