Select Your Language

Notifications

webdunia
webdunia
webdunia
webdunia

ನಾಳೆಯ ಮತದಾನಕ್ಕೆ ಮಧ್ಯಾಹ್ನದ ನಂತರ ಮಳೆ ಅಡ್ಡಿ‌ ಮಾಡುವ ಸಾಧ್ಯತೆ

ನಾಳೆಯ ಮತದಾನಕ್ಕೆ ಮಧ್ಯಾಹ್ನದ ನಂತರ ಮಳೆ ಅಡ್ಡಿ‌ ಮಾಡುವ ಸಾಧ್ಯತೆ
bangalore , ಮಂಗಳವಾರ, 9 ಮೇ 2023 (21:10 IST)
ನಾಳೆಯ ಮತದಾನಕ್ಕೆ ಮಧ್ಯಾಹ್ನದ ನಂತರ ಮಳೆ ಅಡ್ಡಿ‌ ಮಾಡುವ ಸಾಧ್ಯತೆ ಇದೆ ಎಂದು ಮಳೆ ಬಗ್ಗೆ ರಾಜ್ಯ  ಇಲಾಖೆಯಿಂದ ಮುನ್ನೆಚ್ಚರಿಕೆ ನೀಡಲಾಗಿದೆ.ನಾಳೆ ಬೆಳಗ್ಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಕಮ್ಮಿಯಿದೆ.ಮಧ್ಯಾಹ್ನದ ವೇಳೆಗೆ ಮೋಡ ಕವಿದು ಮಳೆ ಬೀಳುವ ಸಾಧ್ಯತೆ ಇದೆ.ಮತದಾನ ಮಾಡುವುವವರು ಅದಷ್ಟು ಬೆಳಗ್ಗೆಯೇ ಮತ‌ ಹಾಕುವುದು ಉತ್ತಮ.ಬೆಂಗಳೂರಿನಲ್ಲಿ ‌ನಾಳೆ ಮಧ್ಯಾಹ್ನದ ನಂತರ ಅಲ್ಪ ಪ್ರಮಾಣದ ಮಳೆ ಬೀಳುವ ಸಾಧ್ಯತೆ.ಕೊಡಗು, ಹಾಸನ, ಚಿಕ್ಕಮಗಳೂರು‌, ಹಾಸನ‌ ಜಿಲ್ಲೆಯಲ್ಲಿ‌ ಮಾತ್ರ ಮೂರು ದಿನ ಯಲ್ಲೋ ಅಲಾರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಜ್ಞ ಎ ಪ್ರಸಾದ್ ಮಾಹಿತಿ ನೀಡಿದ್ದಾರೆ.
 
ಗಾಳಿದಿಕ್ಕಿನಲ್ಲಿ ಸಮುದ್ರಮಟ್ಟದಿಂದ 1.5 ಕಿಲೋ ಮೀಟರ್ ನಷ್ಟು ಟ್ರಫ್ ಉಂಟಾಗಿದೆ .ಜೊತೆಗೆ ತೀವ್ರವಾದ ವಾಯುಭಾರ ಕುಸಿತವಾಗಿದೆ .ಈ ಕುಸಿತ 10 ನೇ ತಾರೀಖು ಚಂಡಮಾರುವಾಗುವ ಸಾಧ್ಯಾತೆ ಇದೆ ಹೀಗಾಗಿ ರಾಜ್ಯ - ರಾಜಧಾನಿಗೆ 5 ದಿನದ ಮಳೆಗೆ ಹೆಚ್ಚು ಮಳೆಯಾಗಲಿದೆ .ಇಂದು ಕಾರವಳಿ ಭಾಗದ ಉತ್ತರ ಕನ್ನಡ, ದಕ್ಷಣ ಕನ್ನಡ ಜಿಲ್ಲೆಗಳಿಗೆ ಮಳೆ ಇದ್ದು,ಇಂದು ಈ ಎರಡು ಭಾಗಕ್ಕು ಯಲ್ಲೋ ಅಲರ್ಟ್ ನೀಡಿಲಾಗಿದೆ .ಇನ್ನು, ದಕ್ಷಣ ಒಳನಾಡಿನ ಕೊಡಗು, ಹಾಸನ್ , ಚಿಕ್ಕಮಗಳೂರು , ಶಿವಮೊಗ್ಗ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.ಮೂರು ದಿನಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದ್ದು ,ಉತ್ತರ ಒಳನಾಡಿಗೆ ಇಂದು ಮತ್ತು ನಾಳೆ ಮಳೆಯಾಗಲಿದೆ 
 
 ಚುನಾವಣಾ ಆಯೋಗಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ.ನಾಳೆ ಮಧ್ಯಹ್ನದ ಮೇಲೆ ಮಳೆಯಾಗುವ ಸಾಧ್ಯಾತೆ ಇದ್ದು ,ಬೆಳ್ಳಗ್ಗೆಯಿಂದ ಮೊಡ ಕವಿದ ವಾತಾವರಣ ಇರಲಿದ್ದು ನಾಳೆ ಸಂಜೆಯ ಮೇಲೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೇವೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಹೊತ್ತಿನಲ್ಲಿ ಹೋಟೆಲ್ ನಲ್ಲಿ ಡಿಸ್ಕೌಂಟ್ ಕೊಡುವವರಿಗೆ ಬ್ರೇಕ್ ಹಾಕಿದ ಚುನಾವಣಾ ಆಯೋಗ