ಚುನಾವಣಾ ಹೊತ್ತಿನಲ್ಲಿ ಹೋಟೆಲ್ ನಲ್ಲಿ ಆಫರ್ ಕೊಡುವುದು ಕಾನೂನು ಅಪರಾಧ ಎಂದು ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಹೋಟೆಲ್ ನಲ್ಲಿ ಉಚಿತ ಊಟದ ವ್ಯವಸ್ಥೆಗೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.ನಾಳೆ ಮತದಾನ ಮಾಡಿದವರಿಗೆ ಉಚಿತ ಊಟ ಹಾಗೂ ಸಿನಿಮಾ ಟಿಕೇಟ್ ಕೊಡುವುದಾಗಿ ಆಫರ್ ನೀಡಿದ ಹೋಟೆಲ್ ಮಾಲೀಕರಿಗೆ ಚುನಾವಣಾ ಆಯೋಗದಿಂದ ಶಾಕ್ ನೀಡಿದೆ. ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಉಚಿತ ಊಟ,ತಿಂಡಿ,ಸಿನೆಮಾ ಟಿಕೇಟ್ ಗೆ ಚುನಾವಣಾ ಅಧಿಕಾರಿ ಬ್ರೇಕ್ ಹಾಕಿದ್ದರೆ.ಹೋಟೆಲ್ ಮಾಲೀಕರು ಉಚಿತ. ಊಟ ಹಾಗೂ ತಿಂಡಿ ವ್ಯವಸ್ಥೆ ಯಿಂದ ಅವರ ಸ್ವಾರ್ಥ ಅಡಗಿದೆ ಎಂದು ಅನುಮಾನ ವ್ಯಕ್ತವಾಗಿದ್ದು, ಹೊಟೇಲ್ ಮಾಲೀಕರು ಚುನಾವಣೆಯನ್ನ ಬಂಡವಾಳ ಮಾಡಿಕೊಂಡಿದ್ದಾರೆ.ಈ ಹಿನ್ನಲೆಯಲ್ಲಿ ಎಲ್ಲಾ ಆಫರ್ ಗೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.