Select Your Language

Notifications

webdunia
webdunia
webdunia
webdunia

18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್
ಕೀವ್ , ಬುಧವಾರ, 17 ಮೇ 2023 (11:23 IST)
ಕೀವ್ : ರಷ್ಯಾ ವಾಯುಪಡೆಯು ಮಂಗಳವಾರ ಉಕ್ರೇನಿನ ಕೀವ್ ಮೇಲೆ ನಡೆಸಿದ ದಾಳಿಯನ್ನ ತಡೆಯುವಲ್ಲಿ ಉಕ್ರೇನ್ ಸೇನೆ ಯಶಸ್ವಿಯಾಗಿದ್ದು, ರಷ್ಯಾದ 18 ಕ್ಷಿಪಣಿಗಳನ್ನ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಸೋಮವಾರ ತಡರಾತ್ರಿ ರಷ್ಯಾದ ಕ್ಷಿಪಣಿಗಳು ವಾಯು, ಸಮುದ್ರ ಹಾಗೂ ಭೂಸೇನೆ ಸೇರಿದಂತೆ ಮೂರು ವಿಭಾಗಳಿಂದ ಉಕ್ರೇನಿನ ರಾಜಧಾನಿ ಕೀವ್ ಮೇಲೆ ದಾಳಿ ನಡೆಸಿತ್ತು. ಆದ್ರೆ ಪಾಶ್ಚಿಮಾತ್ರ ರಾಷ್ಟ್ರಗಳು ಸರಬರಾಜು ಮಾಡಿದ್ದ ಶಸ್ತ್ರಾಸ್ತ್ರಗಳ ಸಹಾಯದಿಂದ ಉಕ್ರೇನ್ ರಷ್ಯಾ ದಾಳಿಯನ್ನ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಯಾವುದೇ ಸಾವು ನೋವುಗಳಾಗಿಲ್ಲ ಎಂದು ತಿಳಿದುಬಂದಿದೆ.

ರಷ್ಯಾ ಕಳೆದ ರಾತ್ರಿ ಉಕ್ರೇನ್ ರಾಜಧಾನಿಯನ್ನ ಗುರಿಯಾಗಿಸಿ MiG-31K ಯುದ್ಧವಿಮಾನದಿಂದ 6 Kinzhal ಏರೋ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಕಪ್ಪು ಸಮುದ್ರದ ಹಡಗುಗಳಿಂದ 9 ಕ್ರೂಸ್ ಕ್ಷಿಪಣಿ ಹಾಗೂ ಮೂರು ಭೂ ಆಧಾರಿತ S-400 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಲ್ಲದೇ ಇರಾನ್ ಡ್ರೋನ್ಗಳಿಂದಲೂ ದಾಳಿ ನಡೆಸಿತ್ತು ಎಂದು ಉಕ್ರೇನ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೆ ಪ್ರತಿದಾಳಿ ನಡೆಸಿದ ಉಕ್ರೇನ್ ಅಮೆರಿಕ ನಿರ್ಮಿತ ಪೇಟ್ರಿಯಾಟಿಕ್ ಕ್ಷಿಪಣಿಗಳನ್ನು ಒಳಗೊಂಡಂತೆ ಉಕ್ರೇನಿನ ಮಿತ್ರರಾಷ್ಟ್ರಗಳು ಒದಗಿಸಿದ್ದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಂದ ರಷ್ಯಾ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. 

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿರ ಮಂದಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಮೋದಿ