Select Your Language

Notifications

webdunia
webdunia
webdunia
webdunia

ಸರ್ವೋದಯ ದಿನಾಚರಣೆ ಅಂಗವಾಗಿ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ

Garlanding of Gandhiji's statue as part of Sarvodaya Day celebrations
bangalore , ಸೋಮವಾರ, 30 ಜನವರಿ 2023 (20:06 IST)
ಸರ್ವೋದಯ ದಿನಾಚರಣೆ ಅಂಗವಾಗಿ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ನಗರದ ಮಹಾತ್ಮ ಗಾಂಧೀಜಿ ರಸ್ತೆಯಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪ್ರತಿಭಾ ಬಾಲಮಂದಿರ ಮಕ್ಕಳಿಂದ ಗೀತ ವಾಚನ, ಚಂದನಾ ವಶಿಷ್ಠ ರವರಿಂದ ವೈಷ್ಣವ ಜನತೋ, ಹಡ್ಸನ್ ಚರ್ಚಿನ ಫಾದರ್ ರೆವೆರೆಂಡ್ ಆಲ್ಫ್ರೆಡ್ ಸುದರ್ಶನ್ ಮತ್ತು ತಂಡದಿಂದ ಬೈಬಲ್ ವಾಚನ, ಗುರುದ್ವಾರದ ಶ್ರೀ ಗುರುಸಿಂಗ್ ಸಭಾ ಮತ್ತು ತಂಡದವರಿಂದ ಗುರು ಗ್ರಂಥ ವಾಚನ, ಮೌಲ್ವಿ ಹಫೀಜ್ ಶಾಬೀರ್ ಹುಸೇನ್  ರವರಿಂದ ಖುರಾನಿನ ವಾಚನ ಮಾಡಲಾಯಿತು. ಈ ವೇಳೆ ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ವಿಶೇಷ ಆಯುಕ್ತರಾದ ರೆಡ್ಡಿ ಶಂಕರ ಬಾಬು, ಪ್ರೀತಿ ಗೆಹ್ಲೋಟ್, ಮಾಜಿ ಮಹಾಪೌರರಾದ ಶ್ರೀಮತಿ. ಪದ್ಮಾವತಿ ಗಂಗಾಧರ್ ಗೌಡ, ಶ್ರೀಮತಿ. ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಇನ್ನಿತರೆ ಗಣ್ಯರುಗಳು ಉಪಸ್ಥಿತರಿದ್ದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ತಿಂಗಳಾದ್ರೂ ಉದ್ಘಾಟನೆಯಾಗದ ಪಾರ್ಕಿಂಗ್ ಕಾಂಪ್ಲೆಕ್ಸ್