Select Your Language

Notifications

webdunia
webdunia
webdunia
webdunia

ಬೆಂಜ್ ಕಾರು ಚಾಲಕನ ಹಿಟ್ ಆ್ಯಂಡ್ ರನ್ ಗೆ ಬಲಿಯಾದ ಪಾದಚಾರಿಯ ಮಾಹಿತಿ ಪತ್ತೆ

The information of the pedestrian who was the victim of the hit and run of the Benz car driver was foun
bangalore , ಸೋಮವಾರ, 30 ಜನವರಿ 2023 (19:50 IST)
ಬೆಂಜ್ ಕಾರು ಚಾಲಕನ ಹಿಟ್ ಆ್ಯಂಡ್ ರನ್ ಗೆ ಬಲಿಯಾದ ಪಾದಚಾರಿಯ ಮಾಹಿತಿ ಪತ್ತೆಯಾಗಿದೆ. ಮೃತನನ್ನ ಆರ್.ಟಿ.ನಗರದ ಚೋಳನಾಯಕನಹಳ್ಳಿ ನಿವಾಸಿ ಡಿ.ಎನ್.ವೆಂಕಟೇಶ್ ಎಂದು ಗುರುತಿಸಲಾಗಿದೆ. ಕಳೆದ ಗುರುವಾರ ರಾತ್ರಿ ಮೇಖ್ರಿ ಸರ್ಕಲ್ ಬಳಿ ನಡೆದಿದ್ದ ಅಪಘಾತದಲ್ಲಿ ವೆಂಕಟೇಶ್ ಮೃತಪಟ್ಟಿದ್ದರು. ಅಪಘಾತವೆಸಗಿದ್ದ ಕಾರು ಚಾಲಕ ಪರಾರಿಯಾಗಿದ್ದ.
 
ಗುರುವಾರ ರಾತ್ರಿ ಮೇಖ್ರಿ ಸರ್ಕಲ್ ಬಳಿ ಆಟೋ ಇಳಿದು ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ವೆಂಕಟೇಶ್ ಗೆ ವೇಗವಾಗಿ ಬಂದ ಬೆಂಜ್ ಕಾರು ಢಿಕ್ಕಿಯಾಗಿತ್ತು, ಅಪಘಾತವಾದ ಕೂಡಲೇ ಸ್ಥಳಿಯರ ನೆರವಿನಿಂದ ಅಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ್ ಮೃತಪಟ್ಟಿದ್ದರು. ಪ್ರತ್ಯಕ್ಷದರ್ಶಿಗಳು ಮಾಹಿತಿಯನ್ವಯ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನ ಪರಿಶೀಲಿಸಿರುವ ಸದಾಶಿವನಗರ ಸಂಚಾರ ಠಾಣಾ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಪರ ಬಜೆಟ್ ಮಂಡಿಸುತ್ತೇನೆ : ಸಿಎಂ ಬೊಮ್ಮಾಯಿ