Select Your Language

Notifications

webdunia
webdunia
webdunia
webdunia

ರಾಜ್ಯ ಚುನಾವಣೆ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ

ರಾಜ್ಯ ಚುನಾವಣೆ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ
bangalore , ಸೋಮವಾರ, 30 ಜನವರಿ 2023 (19:07 IST)
ರಾಜ್ಯ ಚುನಾವಣೆ ಮಾರ್ಗಸೂಚಿಯಂತೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದ್ದು 13 ಐಪಿಎಸ್ ಅಧಿಕಾರಿಗಳು ಹಾಗೂ 74 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಚುನಾವಣೆ ಸಮೀಪ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಐಪಿಎಸ್ ಅಧಿಕಾರಿಗಳು ಡಿವೈಎಸ್ಪಿಗಳನ್ನು ವರ್ಗಾಯಿಸಲಾಗಿದೆ. ಇಂದು ಸಂಜೆಯೊಳಗೆ‌ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ಟ್ರಾನ್ ಫರ್ ಆದೇಶ ಹೊರಬೀಳುವ ಸಾಧ್ಯತೆಯಿದೆ.
 
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು 
ಕಾರ್ತಿಕ್ ರೆಡ್ಡಿ - ರಾಮನಗರ ಎಸ್ಪಿ, ವಿನಾಯಕ್ ಪಾಟೀಲ್ - ಅಸಿಸ್ಟೆಂಟ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಪೊಲೀಸ್ ಜನರಲ್, ಸಂತೋಷ್ ಬಾಬು - ಇಂಟೆಲಿಜೆನ್ಸ್.. ದೇವರಾಜ್ - ಉತ್ತರ ವಿಭಾಗ, ಬೆಂಗಳೂರು ನಗರ, ಸಿರಿಗೌರಿ - ಇಂಟರ್ ನಲ್ ಸೆಕ್ಯೂರಿಟಿ ಡಿವಿಷನ್ (ಐಎಸ್ ಡಿ) ಟಿ.ಪಿ ಶಿವಕುಮಾರ್ - ಕೆಪಿಟಿಸಿಎಲ್, ಶೇಖರ್ ಎಚ್ - ಎಸ್ಪಿ, ಕಾನೂನು‌ ಸುವ್ಯವಸ್ಥೆ ಬೆಳಗಾವಿ ಸಿಟಿ..ಪದ್ಮಿನಿ ಸಾಹೋ - ಚಾಮರಾಜನಗರ ಎಸ್ಪಿ, ಪ್ರದೀಪ್ ಗುಂಟಿ - ಕಾರಾಗೃಹ ಇಲಾಖೆ, ಗೀತಾ ಎಂ.ಎಸ್ - ಟ್ರೈನಿಂಗ್ ಸ್ಕೂಲ್ ಮೈಸೂರು.. ರಾಮರಾಜನ್ - ಕೊಡಗು - ಮಡಿಕೇರಿ ಎಸ್ಪಿ, ರವೀಂದ್ರ ಕಾಶಿನಾಥ್ - ಕಮ್ಯಾಂಡ್ ಸೆಂಟರ್ ಬೆಂಗಳೂರು ನಗರ ಹಾಗೂ ಅಯ್ಯಪ್ಪ ಎಂ.ಎ. ಇಂಟೆಲಿಜೆನ್ಸ್ ವರ್ಗಾವಣೆ ಮಾಡಲಾಗಿದೆ.
 
ಸಾಂಟ್ರೋ ರವಿ ಪತ್ನಿ ನೀಡಿದ ದೂರಿನ ಪ್ರಕರಣ ತನಿಖಾಧಿಕಾರಿ ವರ್ಗ
 
ಇನ್ನೂ‌ 74 ಮಂದಿ‌‌ ಡಿವೈಎಸ್ಪಿ ಅಧಿಕಾರಿಗಳನ್ನ ವರ್ಗಾವಣೆಗೊಳಿಸಲಾಗಿದೆ. ಬೆಂಗಳೂರು ಸೇರಿ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿವೈಎಸ್ಪಿ‌ ಮಟ್ಟದ ಅಧಿಕಾರಿಗಳನ್ನು ಚುನಾವಣಾ ಆಯೋಗದ ಗೈಡ್ ಲೆನ್ಸ್ ನಂತೆ ಟ್ರಾನ್ಸ್ ಫರ್ ಮಾಡಲಾಗಿದೆ. ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು‌‌ ಕೇಸ್ ದಾಖಲಿಸಿದ ಕಾಟನ್‌ಪೇಟೆ‌‌ ಇನ್‌ಸ್ಪೆಕ್ಟರ್ ಪ್ರವೀಣ್ ಪ್ರಕರಣ ಸಂಬಂಧ ಸಿಸಿಬಿಗೆ ನಗರ ಪೊಲೀಸ್ ಆಯುಕ್ತ‌ ಪ್ರತಾಪ್ ರೆಡ್ಡಿ ಆದೇಶಿಸಿದ್ದರು. ಇದರಂತೆ ಎಸಿಪಿ‌ ಎಚ್.ಎನ್.ಧರ್ಮೇಂದ್ರ ಅವರು ತನಿಖೆ‌‌ ಉಸ್ತುವಾರಿ ವಹಿಸಿಕೊಂಡಿದ್ದರು.ಸ್ಯಾಂಟ್ರೊ ರವಿ ಪತ್ನಿ ಹಾಗೂ ಅಮಾನತುಗೊಂಡಿದ್ದ ಇನ್ ಸ್ಪೆಕ್ಟರ್ ಪ್ರವೀಣ್ ಅವರನ್ನು ವಿಚಾರಣೆಗೊಳಪಡಿಸಿದ್ದರು.ಸದ್ಯ‌ ಐಪಿಎಸ್ ಅಧಿಕಾರಿ ಹಾಗೂ ಡಿವೈಎಸ್ಪಿಗಳನ್ಜು ವರ್ಗಗೊಳಿಸಲಾಗಿದ್ದು ಇಂದು ಸಂಜೆಯೊಳಗೆ ಇನ್ ಸ್ಪೆಕ್ಟರ್ ಗಳ ಟ್ರಾನ್‌ಫರ್ ಆದೇಶ ಹೊರಬೀಳುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ದೂರು