Select Your Language

Notifications

webdunia
webdunia
webdunia
webdunia

ಜನಪರ ಬಜೆಟ್ ಮಂಡಿಸುತ್ತೇನೆ : ಸಿಎಂ ಬೊಮ್ಮಾಯಿ

ಜನಪರ  ಬಜೆಟ್ ಮಂಡಿಸುತ್ತೇನೆ : ಸಿಎಂ ಬೊಮ್ಮಾಯಿ
bangalore , ಸೋಮವಾರ, 30 ಜನವರಿ 2023 (19:40 IST)
ಈ ಬಾರಿಯ ಬಜೆಟ್‌ನಲ್ಲಿ ರೈತರು, ಮಹಿಳೆಯರು, ದೀನ ದಲಿತರು, ಹಿಂದುಳಿದವರು, ದುಡಿಯುವ ವರ್ಗಕ್ಕೆ ಹೆಚ್ಚು ಒತ್ತು ನೀಡಿ ಜನಪರವಾದ ಬಜೆಟ್ ಮಂಡಿಸಲಿದ್ದೇನೆ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಮಹಾತ್ಮಾ ಗಾಂಧಿಜೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ 2 ನಿಮಿಷಗಳ ಮೌನಾಚರಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತೀರ್ಮಾನಿಸಿದಂತೆ ಫೆ.17 ರಂದು ಬಜೆಟ್ ಮಂಡನೆ ಮಾಡಲಿದ್ದೇನೆ.ಇದೊಂದು ಜನಪರವಾದ ಬಜೆಟ್ ಆಗಲಿದೆ. ಎಲ್ಲರ ನಿರೀಕ್ಷೆಗಳನ್ನು ಈಡೇರಿಸುವ ಆಯವ್ಯಯವಾಗಲಿದೆ ಎಂದು ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ತೀರಿಸಲು ಪ್ರಯಾಣಿಕನ ಹಣ ಕದ್ದ ಆಟೋ ಚಾಲಕ