Select Your Language

Notifications

webdunia
webdunia
webdunia
webdunia

ಫೆಬ್ರವರಿ 17 ಕ್ಕೆ ರಾಜ್ಯ ಬಜೆಟ್ ಸಾಧ್ಯತೆ : ಸಿಎಂ ಬೊಮ್ಮಾಯಿ

webdunia
bangalore , ಶನಿವಾರ, 14 ಜನವರಿ 2023 (18:59 IST)
ಮುಂದಿನ ಹಣಕಾಸು ವರ್ಷದ ಬಜೆಟ್ ಫೆಬ್ರವರಿ 17ಕ್ಕೆ ಮಂಡನೆಯಾಗುವ ಸಾಧ್ಯತೆಗಳಿದ್ದು, ಅಗತ್ಯವಾದ ಪೂರ್ವ ತಯಾರಿಗಳು ನಡೆದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾಹಿತಿ ನೀಡಿದರು.ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಜನಪರ, ಜನಕಲ್ಯಾಣದ ಯೋಜನೆಗಳಿರಲಿವೆ.ದುಡಿಯುವ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂಬ ಸುಳಿವು ನೀಡಿದರು.ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಧಾನ ಮಂಡಲದ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನದ ದಿನಾಂಕ ಗೊತ್ತುಪಡಿಸಲಾಗುವುದು. ಪ್ರಸಕ್ತ ಹಣಕಾಸು ವರ್ಷದ ಮೂರು ತ್ರೈಮಾಸಿಕ ಗಳಲ್ಲಿ ಆದಾಯ ಸಂಗ್ರಹ ತೃಪ್ತಿಕರವಾಗಿದೆ. ಕೊನೆಯ ತ್ರೈಮಾಸಿಕದಲ್ಲಿ ಗುರಿ ಮೀರಿದ ಸಾಧನೆಯಾಗುವ ನಿರೀಕ್ಷೆಯಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚಮಸಾಲಿ ಮೀಸಲಾತಿ ವಾಕ್ಸಮರ, ಯಾತ್ನಾಳ್ vs ನಿರಾಣಿ