Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ ಪೋಷಕರಿಗೆ ಮಕಮಲ್ ಟೋಪಿ ಹಾಕೀರೋ ಆರ್ಕಿಡ್..!

ಸಿಲಿಕಾನ್ ಸಿಟಿಯಲ್ಲಿ ಪೋಷಕರಿಗೆ ಮಕಮಲ್ ಟೋಪಿ ಹಾಕೀರೋ ಆರ್ಕಿಡ್..!
bangalore , ಸೋಮವಾರ, 30 ಜನವರಿ 2023 (19:55 IST)
ಒಂದಲ್ಲ ಒಂದು ಹೊಸ ವಿವಾಧಗಳಿಂದ ಸದಾ ಸುದ್ದಿಯಲ್ಲಿದೆ ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆ.  ಸದ್ಯ ಬೆಂಗಳೂರಿನ ಸಾವಿರಾರೂ ಪೋಷಕರಿಗೆ ಮಕಮಲ್ ಟೋಪಿ ಹಾಕಿದೆ.ನಮ್ಮದು ಹೈಟೆಕ್ ಶಾಲೆ ಸಿಬಿಎಸ್ ಸಿ ಪಠ್ಯಕ್ರಮ ಅಂತಾ ಮಕ್ಕಳ ದಾಖಲಾತಿ ವೇಳೆ ಪೋಷಕರಿಗೆ ಯಾಮರಿಸಿ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿಸಿಕೊಂಡಿವೆ ಆರ್ಕಿಡ್ ಶಿಕ್ಷಣ ಸಂಸ್ಥೆಗಳು.ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ಒಂದೊರಲ್ಲಿಯೇ 21 ಶಾಲೆಗಳನ್ನ ಹೊಂದಿರುವ ಆರ್ಕಿಡ್ ಸಂಸ್ಥೆ ಬೆಂಗಳೂರಿನ ಸಾವಿರಾರೂ ಪೋಷಕರಿಗೆ ಮಕಮಲ್ ಟೋಪಿ ಹಾಕಿ ಯಾಮರಿಸಿದೆ. 
 
ಅಷ್ಟೇ ಅಲ್ಲದೇ ಆರ್ಕಿಡ್ ಸಂಸ್ಥೆ  ಬೆಂಗಳೂರಿನಲ್ಲಿ 21 ಶಾಲೆಗಳನ್ನ ನಡೆಸುತ್ತಿದ್ದು ಸಿಬಿಎಸ್ ಸಿ ಪಠ್ಯಕ್ರಮ ಅಂತಾ ಎಲ್ಲಡೆ ಪೋಷಕರಿಗೆ ಪುಂಗಿ ಲಕ್ಷ ಲಕ್ಷ ಹಣ ಪೀಕಿದೆ ಅಸಲಿಗೆ ಬೆಂಗಳೂರಿನ 21 ಆರ್ಕಿಡ್ ಶಾಲೆಗಳಲ್ಲಿ ಸಿಬಿಎಸ್ ಸಿ ಮಾನ್ಯತೆ ಇರುವುದು ನಾಲ್ಕೇ ನಾಲ್ಕು ಶಾಲೆಗಳಿಗೆ ಮಾತ್ರ ಎಂಬ ಶಾಕಿಂಗ್ ಸುದ್ದಿ ಪೋಷಕರಿಗೆ ಮತಷ್ಟು ಟೆನ್ಷನ್ ಶುರುಮಾಡಿದೆ.
 
ರಾಜ್ಯದ ಪ್ರತಿಷ್ಠಿತ ಆರ್ಕಿಡ್ ಶಾಲೆಯ ಬೃಹತ ಕಳ್ಳಾಟ ಬಯಲಾಗ್ತಿದ್ದಂತೆ ಬೆಂಗಳೂರಿನ ಹಲವು ಶಾಲೆಗಳ ಮುಂದೆ ಪೋಷಕರಿಂದ ಗಲಾಟೆ ಶುರುವಾಗಿದೆ. ವರ್ಷವಿಡಿ ಮಕ್ಕಳಿಗೆ ಸಿಬಿಎಸ್ ಸಿ ಪಠ ಬೋಧನೆ ಮಾಡಿ ಈಗ ಎಕ್ಸಂಗೆ ಒಂದು ತಿಂಗಳು ಸಮಯ ಇರುವಾಗ ನಮ್ದು ರಾಜ್ಯಪಠ್ಯಕ್ರಮ ಶಾಲೆ ರಾಜ್ಯ ಪಠ್ಯಕ್ರಮಕ್ಕೆ ಮಕ್ಕಳು ಎಕ್ಸಾಂ ಬರೆಯಬೇಕು ಅಂತಾ ನವರಂಗಿ ಆಟ ಶುರು ಮಾಡಿದ್ದು ಪೋಷಕರು ಕಂಗಾಲಾಗಿದ್ದಾರೆ. ಪ್ರತಿಷ್ಠಿತ ಶಾಲೆ ಅಂತಾ ಬಂದ ಸಾವಿರಾರು ಮಕ್ಕಳ ಭವಿಷ್ಯಕ್ಕೆ ತಂದ ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆ ಕುತ್ತು ತಂದಿದೆ. ಸಾವಿರಾರು ಪೋಷಕರ ಆತಂಕಕ್ಕೆ ಕಾರಣಾಗಿದೆ. ಬೆಂಗಳೂರಿನಲ್ಲಿ ಆರ್ಕಿಡ್ 21 ಶಾಲೆಗಳಿವೆ ಈ 21 ಶಾಲೆಗಳಿಲ್ಲಿಯೂ ಆರ್ಕಿಡ್ ಶಿಕ್ಷಣ ಸಂಸ್ಥೆ ಬಹುತೇಕ ಬ್ಯಾಂಚ್ ಗಳಲ್ಲಿ ಪೋಷಕರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಬಿಸಿಎಸ್ ಸಿ ಮಾನ್ಯತೆ ಹೊಂದಿರುವ ಶಾಲೆ ಅಂತಾ ಲಕ್ಷ ಲಕ್ಷ ಶುಲ್ಕ ಸುಲಿಗೆ ಮಾಡಿದೆ ಆದ್ರೆ ಈಗ ಶಿಕ್ಷಣ ಇಲಾಖೆ 5&8ನೇ ತರಗತಿಗೆ ವಾರ್ಷಿಕ ಪರೀಕ್ಷೆಗೆ ಎಕ್ಸಾಂ ಮಾಡ್ತೀದ್ದಂತೆ ಆರ್ಕಿಡ್ ಶಾಲೆಗಳ ಬಡವಾಳ ಹೊರಕ್ಕೆ ಬಂದಿದೆ.
 
ಬೆಂಗಳೂರಿನಲ್ಲಿ ಆರ್ಕಿಡ್ ಶಿಕ್ಷಣ ಸಂಸ್ಥೆಯ ನಾಲ್ಕು ಶಾಲೆಗಳಿಗೆ ಮಾತ್ರ ಸಿಬಿಎಸ್ ಸಿ ಮಾನ್ಯತೆ ಇದೆ ಆದ್ರೆ ಆರ್ಕಿಡ್ ಶಾಲಾ ಆಡಳಿತ ಮಂಡಳಿ ಮಾತ್ರ ಎಲ್ಲ ಬ್ಯಾಂಚ್ ಶಾಲೆಗಳಲ್ಲಿಯೂ ಸಿಬಿಎಸ್ ಸಿ ಮಾನ್ಯತೆ ಅಂತಾ LKG, UKG ಹಾಗೂ ನರ್ಸರಿಯಿಂದಲೇ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿ ಈಗ ನಮ್ದು ರಾಜ್ಯಪಠ್ಯಕ್ರಮ ಅಂತಾ ಡ್ರಾಮಾ ಶುರು ಮಾಡಿದ್ದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ಕಾರಣವಾಗಿದ್ದು ಪೋಷಕರ ಆಕ್ರೋಶಕ್ಕೆ ಆರ್ಕಿಡ್ ಶಾಲೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಜ್ ಕಾರು ಚಾಲಕನ ಹಿಟ್ ಆ್ಯಂಡ್ ರನ್ ಗೆ ಬಲಿಯಾದ ಪಾದಚಾರಿಯ ಮಾಹಿತಿ ಪತ್ತೆ