Select Your Language

Notifications

webdunia
webdunia
webdunia
webdunia

ಲೇಔಟ್​ ನಿವೇಶನ ಮಾಡಿ ಹಂಚಿಕೆಯಲ್ಲಿ ಪಾಲುದಾರನಿಗೆ ವಂಚನೆ

ಲೇಔಟ್​ ನಿವೇಶನ ಮಾಡಿ  ಹಂಚಿಕೆಯಲ್ಲಿ ಪಾಲುದಾರನಿಗೆ ವಂಚನೆ
bangalore , ಶನಿವಾರ, 4 ಫೆಬ್ರವರಿ 2023 (19:46 IST)
ಲೇಔಟ್​ ನಿವೇಶನ ಮಾಡಿ  ಹಂಚಿಕೆಯಲ್ಲಿ ಪಾಲುದಾರನಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ  ಬಿಜೆಪಿ ಎಂಎಲ್​ಸಿ ಆರ್​. ಶಂಕರ್​ ಅವರ ಪತ್ನಿ ಧನಲಕ್ಷ್ಮಿ ಆರ್ ಶಂಕರ್ ಹಾಗೂ ಪುತ್ರ ಜ್ಯೋತಿರ್ ತೇಜೋಮಯಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಎಫ್​ಐಆರ್​ ದಾಖಲಾಗಿದೆಅಲ್ಲದೆ, ರಾಜಣ್ಣ ಎಂಬ ಇನ್ನೊರ್ವ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
 
ಅಕ್ರಮವಾಗಿ 23 ಸೈಟ್​ಗಳನ್ನು ಮಾರಾಟ ಮಾಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಕಂಪನಿಯ ಪಾಲುದಾರರಾದ ಪ್ರಭಾವತಿ  ಇಂದಿರಾನಗರ ಠಾಣೆಗೆ ದೂರು‌ ನೀಡಿದ್ದಾರೆ.ಕಂಪನಿ ಹೆಸರಿನಲ್ಲಿ ಬಿದರಹಳ್ಳಿಯ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಾಣ‌ ಮಾಡಿದ್ದರು. ನಿರ್ಮಾಣದ ವೇಳೆ ನಾಲ್ವರು ಪಾಲುದಾರರ ನಡುವೆ ಒಪ್ಪಂದ ಆಗಿತ್ತು. ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯ ಎಂಬ ಒಪ್ಪಂದಕ್ಕೆ ಎಲ್ಲರು ಸಹಿ ಹಾಕಿದ್ದರು. ಇದೀಗ ಪ್ರಭಾವತಿ ಅವರನ್ನು ಬಿಟ್ಟು ಇನ್ನುಳಿದ ಮೂವರು ಸೈಟ್ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಜತೆಗೆ ಅಕ್ರಮವಾಗಿ ಬ್ಯಾಂಕ್​​ನಲ್ಲಿ ಖಾತೆ ತೆಗೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಪ್ರಭಾವತಿ ಅವರು ಉಲ್ಲೇಖಿಸಿದ್ದಾರೆ. ಸದ್ಯ ಮೂವರ ವಿರುದ್ಧ ಪ್ರಕರಣ ದಾಖಲಿಸಿರುವ ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳತನಕ್ಕೆ ವಿಫಲ ಯತ್ನ