ಅದಾನಿ ಕಂಪನಿ ಉಳಿಸೋಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಅದಾನಿ ಅವರದು 8200 ಕೋಟಿ ಆಸ್ತಿ 9999 ಕೋಟಿ ಆಗುವುದಕ್ಕೆ ಕಾರಣವೇನು..? ದೊಡ್ಡ ದೊಡ್ಡ ಸಂಸ್ಥೆಗಳಿಗೆ ಒಂದು ಬಿಲಿಯನ್ ದುಡಿಯೋಕೆ 20 ವರ್ಷ ಬೇಕು. ಆದರೆ ಮೂರೇ ವರ್ಷದಲ್ಲಿ ಇಷ್ಟು ಹೇಗೆ ಸಾಧ್ಯ. ಎಲ್ ಐಸಿಯಲ್ಲಿ ೨೮ ಕೋಟಿ ಜನ ಇನ್ವೆಸ್ಟ್ ಮಾಡಿದ್ದಾರೆ. ಈ ಎಲ್ ಐಸಿ ಆದಾನಿ ಗ್ರೂಪ್ ಗೆ ಇನ್ವೆಸ್ಟ್ ಮಾಡಿದೆ. ಈ ಪಬ್ಲಿಕ್ ಪ್ರಾಪರ್ಟಿ ಅದೇಗೆ ಕೊಟ್ರು ಆದ್ದರಿಂದ ಅದಾನಿ ಕಂಪನಿ ಉಳಿಸೋಕೆ ಪ್ರಧಾನಿ ಮುಂದಾಗಿದ್ದಾರೆ. ಈ ಪ್ರಕರಣ ಮುಚ್ಚಿಹಾಕೋಕೆ ಪ್ರಧಾನಿ ನೋಡ್ತಿದ್ದಾರೆ. ಈ ಬಗ್ಗೆ ಸಂಸತ್ ಜಂಟಿ ಸಮಿತಿಯನ್ನು ಮಾಡಿ ತನಿಖೆಯನ್ನ ಮಾಡಿಸಬೇಕು ಎಂದು ಒತ್ತಾಯಿಸಿದರು.