Select Your Language

Notifications

webdunia
webdunia
webdunia
webdunia

ಎಎಪಿಗೆ ಸೇರ್ಪಡೆಯಾದ ನಟಿ ಹಾಗೂ ಸಮಾಜ ಸೇವಕಿ ಡಾ.ಪೂಜಾ ರಮೇಶ್

Actress and social worker Dr. Pooja Ramesh joined AAP
bangalore , ಶನಿವಾರ, 4 ಫೆಬ್ರವರಿ 2023 (19:32 IST)
ನಟಿ ಹಾಗೂ ಸಮಾಜಸೇವಕಿ ಡಾ. ಪೂಜಾ ರಮೇಶ್‌ರವರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಕುಶಲಸ್ವಾಮಿಯವರು ಪೂಜಾರವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
 
ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, ಆಮ್‌ ಆದ್ಮಿ ಪಾರ್ಟಿಯು ಜನಾನುರಾಗಿ ಹಾಗೂ ಪ್ರಾಮಾಣಿಕ ಮನಸ್ಸುಗಳನ್ನು ಆಕರ್ಷಿಸುವುದರಲ್ಲಿ ಯಶಸ್ವಿಯಾಗುತ್ತಿದೆ. ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಇಚ್ಛೆ ಹೊಂದಿರುವ ಎಲ್ಲರಿಗೂ ಆಮ್‌ ಆದ್ಮಿ ಪಾರ್ಟಿಯು ಒಂದು ವೇದಿಕೆಯಾಗಿದ್ದು, ಅಂತಹವರು ಈ ಅವಕಾಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದ ಬಗ್ಗೆ ಅಪಾರ ಕಾಳಜಿಯುಳ್ಳ ಪೂಜಾ ರಮೇಶ್‌ರವರ ಪಕ್ಷ ಸೇರ್ಪಡೆಯು ನಮ್ಮೆಲ್ಲರ ಉತ್ಸಾಹ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅದಾನಿ ವಿಚಾರ ಮುಚ್ಚಿಹಾಕೋಕೆ ಪ್ರಧಾನಿ ನೋಡ್ತಿದ್ದಾರೆ-ಪ್ರಿಯಾಂಕ್