Publish Date: Sat, 04 Feb 2023 (19:39 IST)
Updated Date: Sat, 04 Feb 2023 (19:45 IST)
ಯಾರು ಇಲ್ಲ ಎಂದುಕೊಂಡು ಮನೆಯೊಂದಕ್ಕೆ ನುಗ್ಗಿ ಬೀಗ ಮುರಿಯಲು ಪ್ರಯತ್ನ ಮಾಡಿದ್ದಾರೆ. ನಂತರ ಚಪ್ಪಲಿ ಸ್ಟ್ಯಾಂಡ್ ಬಳಿ ಕದ್ದು ಕೂತಿದ್ದ ಕಳ್ಳ ,ಆಗ ಮನೆಯೋಳಗಿದ್ದ ಮಾಲೀಕರು ಶಬ್ಧ ಬಂದ ಹಿನ್ನೆಲೆ ಅಲರ್ಟ್ ಆಗಿದ್ದಾರೆ. ತಕ್ಷಣ ಅಕ್ಕಪಕ್ಕದವರಿಗೆ ಮಾಹಿತಿ ತಿಳಿಸಿ ಕಳ್ಳನನ್ನ ಹಿಡಿಯಲು ಮನೆಯವರು ಮುಂದಾಗಿದ್ದಾರೆ.
ಮನೆಯವರು ಕಿರುಚಾಡುತ್ತಿದ್ದಂತೆ ಕಳ್ಳ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.ಬೈಕ್ ನಲ್ಲಿ ಬಂದಿದ್ದ ಮನೆಗಳ್ಳ ಅಲ್ಲದೆ ಇದಕ್ಕೂ ಮೊದಲು
ಎರಡು ಮೂರು ದಿನಗಳಿಂದ ಬೈಕ್ ನಲ್ಲಿ ಬಂದು ಮನೆಗಳನ್ನ ಹೊಂಚು ಹಾಕಿದ್ದ ಇದರಿಂದ ಬೆಳ್ಳಂದೂರು ,ವರ್ತೂರು ಭಾಗದ ಕೊಡತಿ ಬಳಿ ನಡೆದ ಘಟನೆಯಿಂದ ಜನಕ್ಕೆ ಶಾಕ್ ಆಗಿದೆ.ಅಲ್ದೆ ಮನೆ ದೋಚಲು ಗ್ಯಾಸ್ ಕಟರ್ ತೆಗೆದುಕೊಂಡು ಬಂದಿದ್ದ ಕಳ್ಳ ಆದ್ರೆ ಅಕ್ಕ ಪಕ್ಕದ ಮನೆಯವರಿಗೆ ಗೊತ್ತಾಗುತ್ತಿದ್ದಂಗೆ ಗ್ಯಾಸ್ ಕಟರ್ ಬಿಟ್ಟು ಪರಾರಿಯಾಗಿದ್ದಾನೆ.ಮನೆಗಳವಿಗೆ ಬಂದಿದ್ದ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರ್ಯಾನ್ ಪ್ರಾನ್ಸಿಸ್ (Ryan) ಎಂಬುವವರ ಮನೆಗಳ್ಳತನಕ್ಕೆ ಯತ್ನ ಮಾಡಿದ್ದಾರೆ