Publish Date: Sat, 14 Jul 2018 (17:44 IST)
Updated Date: Sat, 14 Jul 2018 (17:47 IST)
ಠಾಣೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ PSI ಸೇರಿ ನಾಲ್ವರು ಪೇದೆಗಳನ್ನು ಅಮಾನತು ಮಾಡಲಾಗಿದೆ. PSI ಆನಂದ್ ಕುಮಾರ್, ಠಾಣಾ ಸಿಬ್ಬಂದಿ ಮಾದೇಶ್, ಮಲ್ಲಿಕಾರ್ಜುನ ಚುಳಕೆ, ವರದರಾಜು ಅಮಾನತ್ತಾದವರು.
ಮಂಡ್ಯ ಎಸ್ಪಿ ಜಿ.ರಾಧಿಕಾರಿಂದ ಅಮಾನತು ಆದೇಶ ಹೊರಬಿದ್ದಿದೆ. ಠಾಣೆಯಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಮೂರ್ತಿ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಘಟನೆ ಇದಾಗಿದೆ. ಮದ್ದೂರು ತಾಲೂಕು ಬೆಳ್ತೂರಿನ ಮೂರ್ತಿ ಮೃತ ವ್ಯಕ್ತಿಯಾಗಿದ್ದಾರೆ. ಬೈಕ್ ಕಳ್ಳತನ ಆರೋಪದಡಿ ವಿಚಾರಣೆಗೆ ಪೊಲೀಸರು ಕರೆತಂದಿದ್ದರು. ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರು. ಆದರೆ ಪೊಲೀಸರು ಲಾಕಪ್ ಡೆತ್ ಮಾಡಿದ್ದಾರೆಂದು ಮೂರ್ತಿ ಸಂಬಂಧಿಕರು ಆರೋಪ ಮಾಡಿದ್ದರು.