Publish Date: Sat, 14 Jul 2018 (17:36 IST)
Updated Date: Sat, 14 Jul 2018 (17:39 IST)
ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಪಿಂಕ್ ಗ್ರಾನೈಟ್ ಬ್ಲಾಕ್ ಗಳು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾಗಿದೆ.
ಅಕ್ರಮ ಗಣಿಗಾರಿಕೆ ಮೇಲೆ ರಾಯಚೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಶ್ವನಾಥ, ಜಯರಾಮೇಗೌಡರ ಮತ್ತು ಲಿಂಗಸೂಗುರ ಸಹಾಯಕ ಆಯುಕ್ತರಾದ ಎಂ, ಪಿ ಮಾರುತಿ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಲಾಗಿದೆ.
ಲಿಂಗಸುಗುರ ತಾಲೂಕಿನ ಮಕಾಪುರ ಗ್ರಾಮದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ 42 ಮೀಟರ್ ಗಳ 10 ಪಿಂಕ್ ಗ್ರಾನೈಟ್ ಬ್ಲಾಕ್ ಗಳು, ಒಂದು ಟ್ರಾಕ್ಟರ್ ಗಣಿಗಾರಿಕೆ ಗೆ ಬಳಸುವ ಏರ್ ಕಾಂಪ್ರೆಸರ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ ಐದು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಜೆ ಎಮ್ ಎಫ್ ಸಿ ನ್ಯಾಯಲದಲ್ಲಿ ದೂರು ದಾಖಲಾಗಿದೆ.