Publish Date: Sat, 14 Jul 2018 (17:20 IST)
Updated Date: Sat, 14 Jul 2018 (17:24 IST)
ಹಾಲಿ ಎಂಎಲ್ಸಿ ಧರ್ಮೇಗೌಡ ಅಧೀನದಲ್ಲಿ ಇರುವಂತಹ ಪವನ್ ವೈನ್ ಮದ್ಯದಂಗಡಿ ಅನ್ನು ಸಕರಾಯಪಟ್ಟಣ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸ್ಥಳಾಂತರಗೊಳಿಸಲು ನಿರ್ಧರಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಸಕ್ಕರಾಯಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಇದಕ್ಕೆ ಸ್ಥಳೀಯರ ಆಕ್ರೋಶವೂ ವ್ಯಕ್ತವಾಗಿದೆ. ಬಂಜಾರ್ ಸಮುದಾಯದವರು ಎಲ್ಲರೂ ಸೇರಿ ನಿರ್ಮಿಸಿರುವ ಲೇಔಟ್ನಲ್ಲಿ ಧನಂಜಯ್ ಎಂಬಾತನಿಂದ 47*48 ಅಳತೆಯ ನಿವೇಶನವನ್ನು ಖರೀದಿಸಿ ಈ ಜಾಗದಲ್ಲಿ ಧರ್ಮೇಗೌಡರ ಅಧೀನದಲ್ಲಿರುವ ಪವನ್ ವೈನ್ಸ್ ಮದ್ಯದ ಅಂಗಡಿಯನ್ನು ಸ್ಥಳಾಂತರ ಮಾಡಲು ತಂತ್ರ ಕುತಂತ್ರವನ್ನು ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಈ ರೀತಿ ಮದ್ಯದ ಅಂಗಡಿಯನ್ನು ಜನ ವಸತಿ ಇರುವ ಜಾಗದಲ್ಲಿ ನಿರ್ಮಿಸಲು ಸಾಧ್ಯವಿಲ್ಲ ಮತ್ತು ಇದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಯಾವುದೇ ಕಾರಣಕ್ಕೂ ಈ ಬಡಾವಣೆಯಲ್ಲಿ ಮದ್ಯದಂಗಡಿ ತರಲು ನಾವು ಬಿಡುವುದಿಲ್ಲ ಎಂದು ಬಡಾವಣೆ ನಿವಾಸಿಗಳು ಎಚ್ಚರಿಸಿದ್ದಾರೆ.