Publish Date: Thu, 02 Jan 2020 (14:17 IST)
Updated Date: Thu, 02 Jan 2020 (14:19 IST)
ಹಾಲಿ ಶಾಸಕರ ವಿರುದ್ಧ ಮಾಜಿ ಸಂಸದರು ಫುಲ್ ಗರಂ ಆಗಿದ್ದು, ಪ್ರತಿಭಟನೆ ಹಾದಿ ತುಳಿದಿದ್ದಾರೆ.
ಮೂಗೂರು ಮತ್ತು ಸಂತೇಮರಳ್ಳಿ ರಸ್ತೆ ಸಾಕಷ್ಟು ಹದಗೆಟ್ಟಿದೆ. ಇದು ಅಂತರ ರಾಜ್ಯ ರಸ್ತೆಯಾಗಿದ್ದು, ತೀರ ಅವ್ಯವಸ್ಥೆಯಿಂದ ಕೂಡಿದೆ. ಶಾಸಕ ಎನ್.ಮಹೇಶ್ ರವರು ಮಂತ್ರಿಯಾಗಿದ್ದವರು, ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತೆ ಮಾಡಬೇಕಾದ್ದು ಕರ್ತವ್ಯ. ಮಂತ್ರಿಯಾಗಿದ್ದಾಗ ಸಾಕಷ್ಟು ಅನುದಾನ ತಂದು ರಸ್ತೆ ಅಭಿವೃದ್ಧಿ ಪಡಿಸಬಹುದಿತ್ತು... ಆದ್ರೆ ಮಾಡಲಿಲ್ಲ. ಹೀಗಂತ ಮಾಜಿ ಸಂಸದ ಆರ್.ದೃವನಾರಾಯಣ್ ಆರೋಪ ಮಾಡಿದ್ದಾರೆ.
ಈಗಲೂ ಸರ್ಕಾರದಿಂದ ಅನುದಾನ ತಂದು, ಈ ಕ್ಷೇತ್ರದ, ರಸ್ತೆಯ ಅಭಿವೃದ್ದಿಯ ಬಗ್ಗೆ ತುರ್ತಾಗಿ ಕೆಲಸ ಮಾಡಬೇಕಾಗಿತ್ತು. ಆದ್ರೆ ಕ್ಷೇತ್ರದ ಜನತೆ ನಾಲ್ಕುಬಾರಿ ಕೈಬಿಟ್ಟಿದ್ದರೂ ಉತ್ತಮವಾದ ಅವಕಾಶ ಕೊಟ್ಟಿದ್ದಾರೆ.
ಇದನ್ನ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.
ಕ್ಷೇತ್ರದ ಜನತೆಯ ಅಭಿಪ್ರಾಯಕ್ಕೆ ಒಳ್ಳೆಯ ಕೆಲಸಗಳಾಗಬೇಕು ಎಂದರು.
ಚಾಮರಾಜನಗರದ ಸಂತೇಮರಳ್ಳಿಯಲ್ಲಿ ಮಾಜಿ ಸಂಸದ ಆರ್.ದೃವನಾರಾಯಣ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಾಲಿ ಶಾಸಕರ ವಿರುದ್ಧ ಕಿಡಿಕಾರಿದ್ರು.