ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಕೂತರೂ ನಿಂತರೂ ಕಾಂಟ್ರವರ್ಸಿ ಎಂಬಂತಾಗಿದೆ ಅವರ ಇತ್ತೀಚೆಗಿನ ಪರಿಸ್ಥಿತಿ. ಇದೀಗ ಮಹೇಶ್ ಬಾಬು ಬಗ್ಗೆ ಹೊಗಳಲು ಹೋಗಿ ವಿವಾದಕ್ಕೀಡಾಗಿದ್ದಾರೆ.
									
										
								
																	
ಸರಿಲೇರು ನೀಕೆವ್ವರು ಎಂಬ ತೆಲುಗು ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಹೇಶ್ ಬಾಬು ನಿಜವಾದ ಸೂಪರ್ ಸ್ಟಾರ್ ಎಂದಿದ್ದು ವಿವಾದಕ್ಕೆ ಕಾರಣವಾಗಿದೆ.
									
			
			 
 			
 
 			
			                     
							
							
			        							
								
																	ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ನನಗೆ ಅವರ ಜತೆ ಡ್ಯಾನ್ಸ್ ಮಾಡುವುದು ನಿಜಕ್ಕೂ ಕಷ್ಟವಾಗ್ತಿತ್ತು. ಆದರೆ ಅವರು ಅದನ್ನು ಹೋಗಲಾಡಿಸಿದರು. ಅವರಿಂದ ತುಂಬಾನೇ ಕಲಿತೆ. ಅವರು ನಿಜವಾದ ಸೂಪರ್ ಸ್ಟಾರ್ ಎಂದಿದ್ದರು. ಇದಕ್ಕೀಗ ರಜನೀಕಾಂತ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಜನಿಯನ್ನು ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೇ ಸೂಪರ್ ಸ್ಟಾರ್ ಎನ್ನಲಾಗುತ್ತಿದೆ. ಹೀಗಿರುವಾಗ ಮಹೇಶ್ ಬಾಬುರನ್ನು ನಿಜವಾದ ಸೂಪರ್ ಸ್ಟಾರ್ ಎಂದು ರಶ್ಮಿಕಾ ಕರೆದಿದ್ದೇಕೆ. ಇದಕ್ಕೆ ಅವರು ಕ್ಷಮೆ ಕೇಳಬೇಕು ಎಂದು ರಜನಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.