Publish Date: Thu, 12 Dec 2019 (09:35 IST)
Updated Date: Thu, 12 Dec 2019 (09:37 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಸಕ್ರಿಯರಾಗಿದ್ದು ಅತೀ ಹೆಚ್ಚು ಫಾಲೋವರ್ ಗಳನ್ನೂ ಹೊಂದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹೆಚ್ಚು ಕನೆಕ್ಟ್ ಆಗಿದ್ದಾರೆ ಕಿಚ್ಚ.
ಆದರೆ ಅವರ ಹೆಸರಿನಲ್ಲಿ ನೂರಾರು ಫೇಸ್ ಬುಕ್ ಪೇಜ್ ಗಳಿವೆ. ಈಗ ಕಿಚ್ಚ ತಮ್ಮ ಅಧಿಕೃತ ಫೇಸ್ ಬುಕ್ ಖಾತೆ ತೆರೆದಿದ್ದು, ಇಲ್ಲಿಯೇ ನನ್ನ ಸಿನಿಮಾದ ಎಲ್ಲಾ ಅಪ್ ಡೇಟ್ ಗಳನ್ನು ನೋಡಬಹುದು ಎಂದಿದ್ದಾರೆ.
ಐ ಆಮ್ ಕೆ ಎನ್ನುವ ಹೆಸರಿನಲ್ಲಿ ಕಿಚ್ಚ ಫೇಸ್ ಬುಕ್ ಪೇಜ್ ತೆರೆದಿದ್ದಾರೆ. ಈಗಾಗಲೇ ಇನ್ ಸ್ಟಾಗ್ರಾಂ, ಟ್ವಿಟರ್ ಅಲ್ಲದೆ, ತಮ್ಮದೇ ಯೂ ಟ್ಯೂಬ್ ಚಾನೆಲ್ ಆರಂಭಿಸಿರುವ ಕಿಚ್ಚ ಇನ್ಮುಂದೆ ಫೇಸ್ ಬುಕ್ ನಲ್ಲೂ ಸಕ್ರಿಯರಾಗಲಿದ್ದಾರೆ.