Select Your Language

Notifications

webdunia
webdunia
webdunia
webdunia

ಗಾಳಿಪಟ ಸಿನಿಮಾಗೂ ಗಾಳಿಪಟ 2 ಗೂ ಸಂಬಂಧವೇ ಇಲ್ವಂತೆ!

ಗಾಳಿಪಟ ಸಿನಿಮಾಗೂ ಗಾಳಿಪಟ 2 ಗೂ ಸಂಬಂಧವೇ ಇಲ್ವಂತೆ!
ಬೆಂಗಳೂರು , ಗುರುವಾರ, 12 ಡಿಸೆಂಬರ್ 2019 (09:01 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿದ್ದ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2008 ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಅದೇ ಟೈಟಲ್ ಇಟ್ಟುಕೊಂಡು ಭಟ್ಟರು ಮತ್ತು ಗಣೇಶ್ ಜೋಡಿ ಮತ್ತೊಂದು ಸಿನಿಮಾ ಮಾಡುತ್ತಿದೆ.


ಅದೇ ಟೀಂ ಗಾಳಿಪಟ 2 ಎಂಬ ಸಿನಿಮಾ ಈಗಾಗಲೇ ಆರಂಭಿಸಿದೆ. ಕುದುರೆಮುಖದ ಪ್ರಕೃತಿ ತಾಣದಲ್ಲಿ ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಆದರೆ ಅಂದಿನ ಗಾಳಿಪಟ ಕತೆಯ ಮುಂದುವರಿದ ಭಾಗ ಇದಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಆ ಗಾಳಿಪಟ ಸಿನಿಮಾಗೂ ಈ ಗಾಳಿಪಟ ಸಿನಿಮಾ ಕತೆಗೂ ಸಂಬಂಧವಿಲ್ಲ. ಆದರೆ ಅಂತಹದ್ದೇ ಒಂದು ರೊಮ್ಯಾಂಟಿಕ್ ಕತೆ ಈ ಸಿನಿಮಾದಲ್ಲೂ ಇರಲಿದೆಯಂತೆ. ಹಾಗಾಗಿ ಅಂದಿನ ಕತೆಯನ್ನೇ ತಲೆಯಲ್ಲಿಟ್ಟುಕೊಂಡು ಏನೇನೋ ನಿರೀಕ್ಷೆ ಬೇಡ ಎಂದು ಚಿತ್ರತಂಡ ಮೊದಲೇ ವಾಸ್ತವಾಂಶ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗೆದ್ದು ಮೋಡಿಯ ಮಾಡಲು ಮತ್ತೆ ಬರ್ತಿದ್ದಾರೆ ರಕ್ಷಿತ್ ಶೆಟ್ಟಿಯ ಈ ಫೇವರಿಟ್ ಜೋಡಿ