Publish Date: Wed, 30 Oct 2019 (10:17 IST)
Updated Date: Wed, 30 Oct 2019 (10:28 IST)
ಬೆಂಗಳೂರು : ಅನಾರೋಗ್ಯದಿಂಧ ಬಳಲುತ್ತಿದ್ದ ಮಾಜಿ ಲೋಕಯುಕ್ತ ನ್ಯಾಯಾಮೂರ್ತಿ ಎನ್ ವೆಂಕಟಾಚಲ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಇವರಿಗೆ 89 ವರ್ಷ ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಧೀಶರಾಗಿ ಸೇವೆ ಸಲ್ಲಿಸಿದ ಇವರು ಕರ್ನಾಟಕದ ನಾಲ್ಕನೇ ಲೋಕಯುಕ್ತರಾಗಿ ಆಯ್ಕೆಯಾದ ಮೇಲೆ ಲೋಕಯುಕ್ತ ಸಂಸ್ಥೆಯ ಬಗ್ಗೆ ಭ್ರಷ್ಟಚಾರಿಗಳಿಗೆ ಭಯ ಹುಟ್ಟಿದ್ದು ಎನ್ನಲಾಗಿದೆ.