ಭಾರತವನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಮಿಸೈಲ್ ಹಾಕ್ತೀವಿ ಎಂದ ಪಾಕ್ ಸಚಿವ

ಬುಧವಾರ, 30 ಅಕ್ಟೋಬರ್ 2019 (10:14 IST)
ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಭಾರತವನ್ನು ಬೆಂಬಲಿಸುವ ಯಾವುದೇ ರಾಷ್ಟ್ರದ ಮೇಲೂ ಮಿಸೈಲ್ ಹಾಕ್ತೀವಿ ಎಂದು ಪಾಕ್ ಸಚಿವ ಫವಾದ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.


ಇಮ್ರಾನ್ ಖಾನ್ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಮಾಡಿದ ಭಾಷಣ ಜಾಗತಿಕವಾಗಿ ಟೀಕೆಗೆ ಗುರಿಯಾಗಿತ್ತು. ಅದರ ಬೆನ್ನಲ್ಲೇ ಈಗ ಪಾಕಿಸ್ತಾನದ ರೈಲ್ವೇ ಸಚಿವ ಫವಾದ್ ಕಾರ್ಯಕ್ರಮವೊಂದರಲ್ಲಿ ಇಂತಹದ್ದೊಂದು ಎಡವಟ್ಟು ಹೇಳಿಕೆ ನೀಡಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಭಾರತವನ್ನು ಬೆಂಬಲಿಸುವ ರಾಷ್ಟ್ರಗಳೆಲ್ಲಾ ನಮ್ಮ ಶತ್ರು ರಾಷ್ಟ್ರಗಳೆಂದೇ ಪರಿಗಣಿಸಬೇಕಾಗುತ್ತದೆ.  ಒಂದು ವೇಳೆ ಭಾರತ-ಪಾಕಿಸ್ತಾನ ನಡುವೆ ಯುದ್ಧವಾದರೂ ಭಾರತವನ್ನು ಬೆಂಬಲಿಸುವ ರಾಷ್ಟ್ರಗಳನ್ನೂ ಸುಮ್ಮನೇ ಬಿಡಲ್ಲ ಎಂದು ಫವಾದ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತಿ ಹೀಗೆ ಹೇಳಿದ್ದಕ್ಕೆ ಪತ್ನಿ ಮಾಡಿದ್ದೇನು ಗೊತ್ತಾ?