Select Your Language

Notifications

webdunia
webdunia
webdunia
webdunia

ಪಾಕಿಸ್ತಾನಕ್ಕೆ ಬಂದು ಆಡಿ: ವಿರಾಟ್ ಕೊಹ್ಲಿಗೆ ಪಾಕ್ ಅಭಿಮಾನಿಯ ಆಹ್ವಾನ

ಪಾಕಿಸ್ತಾನಕ್ಕೆ ಬಂದು ಆಡಿ: ವಿರಾಟ್ ಕೊಹ್ಲಿಗೆ ಪಾಕ್ ಅಭಿಮಾನಿಯ ಆಹ್ವಾನ
ನವದೆಹಲಿ , ಗುರುವಾರ, 10 ಅಕ್ಟೋಬರ್ 2019 (10:04 IST)
ನವದೆಹಲಿ: ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧ ಸಂಪೂರ್ಣ ನಿಂತಿದೆ. ಆದರೆ ಅಭಿಮಾನಿಗಳು ಮಾತ್ರ ಉಭಯ ದೇಶಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುವುದನ್ನು ನೋಡಲು ಬಯಸುತ್ತಿದ್ದಾರೆ.


ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೆಂದರೆ ಪಾಕಿಸ್ತಾನದಲ್ಲೂ ಅನೇಕ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಇದೀಗ ಅಂತಹದ್ದೇ ಅಭಿಮಾನಿಯೊಬ್ಬ ಟೀಂ ಇಂಡಿಯಾ ನಾಯಕನಿಗೆ ಪಾಕಿಸ್ತಾನದಲ್ಲಿ ಆಡಲು ಆಹ್ವಾನವಿತ್ತಿದ್ದಾನೆ.

ಪಾಕಿಸ್ತಾನದ ಗಧಾಫಿ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದ ವೇಳೆ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ನಾವು ನಿಮ್ಮನ್ನು ಪಾಕಿಸ್ತಾನದಲ್ಲಿ ಆಡುವುದನ್ನು ನೋಡಲು ಬಯಸುತ್ತೇವೆ ಎಂದು ಪ್ಲೇಕಾರ್ಡ್ ಹಿಡಿದು ಆಹ್ವಾನವಿತ್ತಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

50 ನೇ ಟೆಸ್ಟ್ ಪಂದ್ಯಕ್ಕೆ ನಾಯಕರಾದ ವಿರಾಟ್ ಕೊಹ್ಲಿ: ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್